ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 15 ಪ್ರಮುಖ ನಾಯಕರ ಜೊತೆ ಮಹತ್ವದ ಸಭೆ ನಡೆಯಲಿದೆ.
ಹೌದು ರಾಜ್ಯ ವಿಧಾನಸಭಾ ಚುನಾವಣೆ ಸೋಲು ವಿಪಕ್ಷ ಬಿಜೆಪಿಯನ್ನು ಕಂಗೆಡಿಸಿದೆ. ನಾಯಕರು ದಿನಕ್ಕೊಬ್ಬರಂತೆ ಬಹಿರಂಗವಾಗಿ ಮಾತನಾಡುತ್ತಿದ್ದು ಶೋಕಾಸ್ ನೋಟೀಸ್ ಕೊಡುವ ಹಂತಕ್ಕೆ ತಲುಪಿದೆ. ಈ ಮಧ್ಯೆ ಇಂದು ಬಿಜೆಪಿ ಮಹತ್ವದ ಸಭೆ ನಡೆಸಲಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯ್ದ ಪದಾಧಿಕಾರಿಗಳ ಮತ್ತು ಕೆಲವು ಪ್ರಮುಖರ ಸಭೆ ನಡೆಯಲಿದೆ.
ಇದನ್ನೂ ಓದಿ: Aadhaar-PAN link: ಆಧಾರ್-ಪಾನ್ ಲಿಂಕ್‌ಗೆ ಇಂದೇ ಕೊನೆ ದಿನ
ಸಭೆಯಲ್ಲಿ ಚುನಾವಣೆ ಬಳಿಕದ ನಾಯಕರ ಹೇಳಿಕೆಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದಲ್ಲಾಗುತ್ತಿರುವ ಆಂತರಿಕ ಕಚ್ಚಾಟ ಹಾಗೂ ವಿರೋಧ ಪಕ್ಷದ ನಾಯಕನ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಮಧ್ಯೆ ಬಹಿರಂಗವಾಗಿ ಹೇಳಿಕೆ ನೀಡಿ ಅಂತರ್ಯುದ್ಧ ಹೆಚ್ಚಿಸಿದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ನೀಡಿದೆ. ಒಂದು ವಾರದೊಳಗಾಗಿ ಕಾರಣ ಸಹಿತ ಉತ್ತರಿಸುವಂತೆ ಹೇಳಿರುವ ಶಿಸ್ತು ಸಮಿತಿ, ಬಹಿರಂಗ ಹೇಳಿಕೆಗೆ ಮುಂದಾಗದಂತೆ ಸೂಚಿಸಿದೆ.
ವಿಪಕ್ಷ ನಾಯಕ ಸ್ಥಾನದ ರೇಸ್‌ನಲ್ಲಿದ್ದಾರೆ ಹಲವರು ನಾಯಕರು
ಬೊಮ್ಮಾಯಿ, ಆರ್.ಅಶೋಕ್, ಅರವಿಂದ್ ಬೆಲ್ಲದ್,ಯತ್ನಾಳ್ ಹೆಸರು ಕೂಡ ಮುಂಚೂಣಿಗೆ ಬಂದಿದೆ.ಯಾರಿಗೆ ಒಲಿಯುತ್ತೆ ವಿಪಕ್ಷ ನಾಯಕನ ಸ್ಥಾನ ಎಂಬುವುದನ್ನ ಕಾದುನೋಡಬೇಕಿದೆ.