Wednesday, December 25, 2024

ಬಿಎಂಟಿಸಿಯ 56 ತರಬೇತಿ ವಾಹನಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ

ಬೆಂಗಳೂರು :  ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಂದು ಘಟಕ ವ್ಯವಸ್ಥಾಪಕರಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ತರಬೇತಿ ವಾಹನಗಳನ್ನು ಹಸ್ತಾಂತರಿಸಲಾಯಿತು.

ಪ್ರತಿಯೊಂದು ಡಿಪೋಗಳಿಗೆ ಒಂದೊಂದು ನೂತನ ಬುಲೋರೊ ವಾಹನಗಳಂತೆ ತರಬೇತಿಗಾಗಿ ಒಟ್ಟು 56 ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ ತೋರಿಸಿದರು.

ಇದನ್ನೂ ಓದಿ : ಚಾಮುಂಡಿ ಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದ ಸಂಭ್ರಮ : ತಾಯಿ ದರ್ಶನಕ್ಕೆ ಬಸ್ ಫ್ರೀ

ಈ ವಾಹನಗಳ ಜೊತೆಗೆ 3 ತರಬೇತಿ ಬಸ್​ಗಳು,3 ಶಿಫ್ಟ್ ಡಿಸೇರ್ ವಾಹನಗಳಿಗೆ ಸಚಿವರು ಚಾಲನೆ ನೀಡಿದರು. ಯಾವುದೇ ಆಪಘಾತ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ವಾಹನಗಳು ಬಳಕೆಗೆ ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ವವತಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದರು.

RELATED ARTICLES

Related Articles

TRENDING ARTICLES