Monday, December 23, 2024

ರಸ್ತೆ ಅಪಘಾತದಲ್ಲಿ ಯೋಧನ ದುರ್ಮರಣ : ಗ್ರಾಮದಲ್ಲಿ ಮಡುಗಟ್ಟಿದ ಶೋಕ

ಚಿಕ್ಕೋಡಿ : ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ತವನಿಧಿ ಘಾಟ್​ ಬಳಿ ಇರುವ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ತಾಲೂಕಿನ ನವಲಿಹಾಳ ಗ್ರಾಮದ ಯೋಧ ಯೋಗೇಶ ಅಪ್ಪಾಸಾಹೇಬ್ ದತ್ತವಾಡೆ (24) ದುರ್ಮರಣ ಹೊಂದಿದ್ದಾರೆ.

ಸ್ನೇಹಿತನ ಮನೆಯಿಂದ ಸ್ವಗ್ರಾಮಕ್ಕೆ ಮರಳುವಾಗ ದುರ್ಘಟನೆ ಸಂಭವಿಸಿದೆ. ಮದ್ರಾಸ್ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತ ಯೋಧ ರಜೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಅಂಬೇಡ್ಕರ್,ಬಸವಣ್ಣನವರ ಇತಿಹಾಸ ತಿರುಚಲು ಬಿಡಬಾರದು : ಸತೀಶ್ ಜಾರಕಿಹೊಳಿ ಕಿಡಿ

ನವಲಿಹಾಳ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನೆರವೇರಿದ್ದು,ಮನೆಯ ಸದಸ್ಯನನ್ನು ಕಳೆದುಕೊಂಡ ಕುಟುಂಬ ವರ್ಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು,ಅಲ್ಲದೆ ಗ್ರಾಮದ ಹೆಮ್ಮೆಯ ಯೋಧನನ್ನು ಕಳೆದುಕೊಂಡ ನವಲಿಹಾಳದಲ್ಲಿ ಶೋಕ ಮಡುಗಟ್ಟಿದೆ.

ಈ ಘಟನೆಯ ಕುರಿತು ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES