Sunday, January 19, 2025

ಕೆಲವರಿಗೆ ಮಾತನಾಡುವ ಚಟವಿದೆ ಈಶ್ವರಪ್ಪ ವಿರುದ್ದ ಶಾಸಕ ಶಿವರಾಮ್ ಹೆಬ್ಬಾರ್ ವಾಗ್ದಾಳಿ

ಉತ್ತರ ಕನ್ನಡ : ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹದ ನಡುವೆ ದಿನಕ್ಕೊಂದರಂತೆ ಬಿಜೆಪಿ ನಾಯಕರು ಸ್ವಪಕ್ಷದವರ ವಿರುದ್ದವೇ ಬಹಿರಂಗವಾಗಿಯೇ ಆಕೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಈಶ್ವರಪ್ಪ ವಿರುದ್ದ ಯಲ್ಲಾಪುರದ ಶಾಸಕ,ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಿಡಿ ಕಾರಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಕೆಲವರಿಗೆ ಮಾತನಾಡುವ ಚಟವಿದೆ,ತಮ್ಮ ತಪ್ಪನ್ನೆಲ್ಲಾ ಮುಚ್ಚಿಕೊಳ್ಳೋಕೆ ಯಾರ ಮೇಲಾದರೂ ಏನಾದರೂ ಹೇಳಿದರೆ ಅವರ ತಪ್ಪುಗಳು ತಿದ್ದಿ ಹೋಗುತ್ತವೆ ಎಂಬುದು ಅವರಲ್ಲಿದೆ ಎಂದು ಈಶ್ವರಪ್ಪನವರ ವಿರುದ್ದ ಹರಿಹಾಯ್ದಿದ್ದಾರೆ.

ಇದನ್ನೂ ಓದಿ : ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡಾ.ಕೆ ಸುಧಾಕರ್

ಈಶ್ವರಪ್ಪನವರಿಗೆ ಟಿಕೇಟ್ ಕೈ ತಪ್ಪಿರುವುದಕ್ಕೆ ನಾವು ಕಾರಣರಲ್ಲ, ಅಲ್ಲದೆ ಜಾಗನೋಡಿ ನೋವಿನ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಸಲಹೆ ನೀಡಿದರು. ಈಶ್ವರಪ್ಪನವರು ಯಾರಿಂದ ಮಂತ್ರಿಗಳಾದರು,ಯಾರಿಂದ ಮಂತ್ರಿಗಿರಿ ಕಳೆದುಕೊಂಡರು ಎನ್ನುವುದಕ್ಕೆ ಮೊದಲು ಅವರು ಉತ್ತರ ಕಂಡುಕೊಳ್ಳಲಿ ಎಂದು ಸಲಹೆ ನೀಡಿದರು.

ನಾವು ಈಶ್ವರಪ್ಪನವರ ಮಾತನ್ನು ಯಾವುದೇ ಕಾರಣಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ನೆಡೆದುಕೊಂಡು ಬಂದ ದಾರಿ,ಹೋಗುವ ದಾರಿಯ ಬಗ್ಗೆ ನಮಗೆ ಸ್ಪಷ್ಟತೆ ಇದೆ ಎಂದ ಹೆಬ್ಬಾರ್ ,ಈಶ್ವರಪ್ಪನವರ ಬಾಲಕಟ್ಟುಮಾಡುವಂತ ಕೆಲಸ ನಾವು ಮಾಡಿಲ್ಲ ,ಮಾಡುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಶಬ್ದಗಳನ್ನು ಬಳಸುವಾಗ ಒಳ್ಳೆಯ ಶಬ್ದಗಳನ್ನು ಬಳಸುವ ಪರಿಪಾಟ ಇಟ್ಟುಕೊಂಡರೇ ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಈಶ್ವರಪ್ಪನವರಿಗೆ ಟಾಂಗ್ ನೀಡಿದರು.

RELATED ARTICLES

Related Articles

TRENDING ARTICLES