Monday, December 23, 2024

ಹೊಸಬರು ಚುನಾವಣೆಗೆ ನಿಲ್ಲೋದಾದ್ರೆ ಕ್ಷೇತ್ರ ಬಿಟ್ಟುಕೊಡುವೆ : ಸಂಸದ ಡಿ.ಕೆ.ಸುರೇಶ್

ಬೆಂಗಳೂರು : ಲೋಕಸಭೆಗೆ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಸಂಸದ ಟಿಕೇಟ್​ ತ್ಯಾಗದ ಮಾತುಗಳನ್ನಾಡಿದ್ದಾರೆ.

ಆನೇಕಲ್​ನಲ್ಲಿ ಮಾತನಾಡಿದ ಅವರು, ನಾನು ಲೋಕಸಭೆ ಚುನಾವಣೆಗೆ ಸ್ಫರ್ಧಿಸುವ ಯೋಚನೆ ಮಾಡಿಲ್ಲ,ಅಲ್ಲದೆ ಬಹಳಷ್ಟು ಜನರು ಈ ಭಾಗದಲ್ಲಿ ಸಂಸದರಾಗುವುದಕ್ಕೆ ಗಟ್ಟಿಮುಟ್ಟಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ವಾಗ್ದಾನ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಲೇಬೇಕು : ಯಡಿಯೂರಪ್ಪ

ಅವರೇನಾದರೂ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದರೆ ಅವರಿಗಾಗಿ ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ದವೆಂದು ಕ್ಷೇತ್ರ ತ್ಯಾಗದ ಮಾತುಗಳನ್ನಾಡಿದ್ದಾರೆ.

ಯಾರಾದರೂ ನಾಯಕರೂ ಬಂದರೆ ಅವರಿಗೆ ಕ್ಷೇತ್ರದ ಪರಿಚಯ ಮಾಡಿಸಿ ನನ್ನ ಸ್ಥಾನವನ್ನು ತ್ಯಜಿಸುತ್ತೇನೆಂಬ ವೈರಾಗ್ಯದ ಮಾತುಗಳನ್ನು ಪುನರುಚ್ಚರಿಸಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.

RELATED ARTICLES

Related Articles

TRENDING ARTICLES