ಬೆಂಗಳೂರು : 200 ಯುನಿಟ್ ಉಚಿತ ವಿದ್ಯುತ್ ಕಲ್ಪಿಸುವ ಗೃಹಜ್ಯೋತಿ ಯೋಜನೆ ಜಾರಿಗೆ ಕೌಂಟ್ಡೌನ್ ಶುರುವಾಗಿದೆ. ನಾಳೆಯಿಂದ ರಾಜ್ಯದ ಜನತೆಗೆ ಗೃಹಜ್ಯೋತಿ ಯೋಜನೆಯ ಲಾಭ ಸಿಗಲಿದೆ.
ಹೌದು, ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ ಎಂದು ಬೆಸ್ಕಾಂ ಎಂ.ಡಿ ಮಹಂತೇಶ್ ಬಿಳಗಿ ಪವರ್ ಟಿವಿಗೆ ಮಾಹಿತಿ ನೀಡಿದರು.
ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆಯಿದೆ. 200 ಯುನಿಟ್ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್ ಕಟ್ಟುವಂತಿಲ್ಲ. ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ಗೃಹಜ್ಯೋತಿ ಅರ್ಜಿ ನೋಂದಣಿ!
ಹೆಚ್ಚು ಬಳಸಿದ್ರೆ ಮಾತ್ರ ಬಿಲ್
ಗೃಹಜ್ಯೋತಿಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ನೀಡಲಾಗುವುದು. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರೀ ವಿದ್ಯುತ್, 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ ಎಂದು ತಿಳಿಸಿದರು.
2.14 ಕೋಟಿ ಫಲಾನುಭವಿಗಳು
ಜೂನ್ 18ರಿಂದ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನು ಆರಂಭ ಮಾಡಲಾಗಿತ್ತು. ಒಟ್ಟು 2.14 ಕೋಟಿಯಷ್ಟು ಗೃಹಜ್ಯೋತಿಯ ಫಲಾನುಭವಿಗಳು ಇದ್ದಾರೆ. ಈ ಪೈಕಿ ಒಟ್ಟು 11ದಿನಗಳಲ್ಲಿ ಒಟ್ಟು 8099932 ರಷ್ಟು ಜನರು ಅರ್ಜಿ ಹಾಕಿದ್ದಾರೆ. ಇನ್ನು 1,33 00068 ಕೋಟಿಯಷ್ಟು ಜನ ನೊಂದಾಣಿಗೆ ಅರ್ಜಿ ಹಾಕಬೇಕಿದೆ ಎಂದು ಮಾಹಿತಿ ನೀಡಿದರು.