Sunday, December 22, 2024

ಹಿಂದೂ-ಮುಸ್ಲಿಂ ಸಹೋದರರ ನಡುವೆ ಬೆಂಕಿ ಹಚ್ಚಬೇಡಿ : ಪರಮೇಶ್ವರಗೆ ಬಿಜೆಪಿ ತಿರುಗೇಟು

ಬೆಂಗಳೂರು : ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದಿದ್ದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ರಾಜ್ಯ ಬಿಜೆಪಿ ತಿರುಗೇಟು ಕೊಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರೇ, ನಿನ್ನೆ ಸಿದ್ದರಾಮಯ್ಯರವರು ಮೈದಾನದ ಹೆಸರನ್ನೇ ಬದಲಾಯಿಸಿದ್ದರು. ತಾವು ಹೀಗೆ! ಎಂದು ಎಂದು ಛೇಡಿಸಿದೆ.

ನಮಗೆ ಬಂದಿರುವುದು ಒಂದೇ ಸಮುದಾಯದ ಮತಗಳು ಎಂಬ ಭ್ರಮೆಯಿಂದ ಹೊರ ಬನ್ನಿ. ಕಾಂಗ್ರೆಸ್ ಸರ್ಕಾರ ಎಲ್ಲ ಸಮುದಾಯದವರನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸ ಮಾಡಬೇಕು. ರಾಜ್ಯದ ಜನತೆ ಸಹೋದರರಂತೆ ಬದುಕುತ್ತಿದ್ದಾರೆ. ಅವರ ನಡುವೆ ಈ ರೀತಿ ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮೊದಲು ಬಿಡಿ ಎಂದು ಬಿಜೆಪಿಗೆ ಕುಟುಕಿದೆ.

ಇದನ್ನೂ ಓದಿ : ಈ ಕ್ಷಣ ಇವಾಗ ಕಾಂಗ್ರೆಸ್ ನವ್ರು ಪ್ರಾಮಾಣಿಕತೆಯನ್ನು ಸಾಬೀತು ಪಡಿಸಿಕೊಳ್ಳಬೇಕು : ಸಿ.ಟಿ ರವಿ

ಪರಮೇಶ್ವರ್ ಹೇಳಿದ್ದೇನು?

ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಬಕ್ರೀದ್ ಹಿನ್ನೆಲೆಯಲ್ಲಿ ಕೊರಟಗೆರೆಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ನಿಮ್ಮ ಆಶೀರ್ವಾದದಿಂದ ನಾನು ಗೃಹಸಚಿವನಾಗಿದ್ದೇನೆ. ಆ ದೇವರ ಆಶೀರ್ವಾದ ಇಲ್ಲದೇ ಇದ್ದರೆ ನಾನು ಶಾಸಕನಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

RELATED ARTICLES

Related Articles

TRENDING ARTICLES