Wednesday, January 22, 2025

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿ ; ರಕ್ತದ ರುಜು ಹಾಕಿ ಆಗ್ರಹ

ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಸ್ವಪಕ್ಕದಲೇ ಹಗ್ಗ ಜಿಗಾಟ ನಡೆಯುತ್ತಿದ್ದು, ಇದರ ನಡುವೆಯೇ ಬಿ.ವೈ ವಿಜಯೇಂದ್ರಗೆ (B Y Vijayendra) ರಾಜ್ಯಾಧ್ಯಕ್ಷ ಸ್ಥಾನ  ನೀಡಿ ಎಂದು ಆಗ್ರಹ ಮಾಡಿದ್ದಾರೆ

ಹೌದು, ಮಂಡ್ಯದಲ್ಲಿ ಬಿ.ವೈ ವಿಜಯೇಂದ್ರಗೆ (B Y Vijayendra) ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವಿನೂತನ ಪ್ರತಿಭಟನೆ ಇಂದು ಕೈಗೊಳ್ಳಲಾಗಿದೆ.

ಮಂಡ್ಯದ ಬಿಜೆಪಿ ಕಾಯಕರ್ತರು  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಪೋಸ್ಟ್ ಆಫೀಸ್ ಬಳಿ ಪತ್ರ ಬರೆದಿರುವ ಘಟನೆ ನಡೆದಿದೆ.ಈ ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಮುದ್ರೆ ಒತ್ತಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.

ಪತ್ರದಲ್ಲಿ ಏನಿದೆ

ಯಡಿಯೂರಪ್ಪ ಒಂದು ಸೀಟನ್ನ 114 ಸೀಟ್ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದ್ರು. ಆದರೆ ಈಗ ರಾಜ್ಯದ ನಾಯಕರ  ಬೇಜವ್ದಾರಿತನದಿಂದ ಬಿಜೆಪಿ ಸೋತಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರಿಗೆ ಪಟ್ಟಕಟ್ಟಿ. ಲೋಕಸಭಾ ಚುನಾವಣೆಯಲ್ಲಿ (Loksabha Election) ರಾಜ್ಯದಲ್ಲಿ ಹೆಚ್ಚು ಸೀಟನ್ನು ಬಿಜೆಪಿ ಗೆಲ್ಲುತ್ತೆ. ಪತ್ರದಲ್ಲಿ ರಕ್ತದ ಸಹಿ ಮಾಡಿ ನಿಮಗೆ ಅರ್ಪಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

 

RELATED ARTICLES

Related Articles

TRENDING ARTICLES