Sunday, December 22, 2024

ವಿರಾಜಪೇಟೆಯಲ್ಲಿ ‘ಗಜ’ಪಡೆ : ಇಲ್ಲಿದೆ ‘ಕಾಟೇರ’ನ ಆಫ್ ರೋಡ್ ಸ್ಟೋರಿ ‘ದರ್ಶನ’

ಬೆಂಗಳೂರು : 56ನೇ ಚಿತ್ರ ಕಾಟೇರ ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟ ದರ್ಶನ್, ಆಷಾಢಮಾಸದಲ್ಲಿ ಸಣ್ಣದೊಂದು ಬ್ರೇಕ್ ಪಡೆದು ಜಾಲಿ ಟ್ರಿಪ್ ಮುಗಿಸಿ ಬಂದಿದ್ದಾರೆ.

ಹೌದು, ವಿರಾಜಪೇಟೆಯ ಹಚ್ಚ ಹಸಿರ ಬನಕ್ಕೆ ತೆರಳಿ ಬೊಂಬಾಟ್ ಕ್ಯಾಂಪ್ ಹಾಕಿ, ಹಾಫ್ ರೋಡ್ ಟ್ರಿಪ್ ಮುಗಿಸಿದ್ದಾರೆ ದಚ್ಚು. ಮತ್ತೊಂದು ವಿಶೇಷ ಅಂದ್ರೆ, ಫಸ್ಟ್ ಟೈಮ್ ಪುತ್ರನೊಂದಿಗೆ ಮಸ್ತ್ ಮಜಾ ಮಾಡಿ ಬಂದಿದ್ದಾರೆ ಕಾಟೇರ. ಅದರ ಬ್ಯೂಟಿಫುಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

2021ರಲ್ಲಿ ರಾಬರ್ಟ್​ ಎಂಬ ಇಂಡಸ್ಟ್ರಿ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇದೀಗ ತಮ್ಮ 56ನೇ ಸಿನಿಮಾ ಕಾಟೇರದಲ್ಲಿ ಬ್ಯುಸಿ ಆಗಿದ್ದಾರೆ. ವಿಶೇಷ ಅಂದರೆ ರಾಬರ್ಟ್​ಗೆ ಆಕ್ಷನ್ ಕಟ್ ಹೇಳಿದ್ದ ತರುಣ್ ಸುಧೀರ್ ಅವರೇ ಕಾಟೇರ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದ್ದು, ದೊಡ್ಡ ಲೆವೆಲ್​ನಲ್ಲಿ ಸಿನಿಮಾ ತಯಾರಾಗುತ್ತಿದೆ.

ದಟ್ಟ ಅರಣ್ಯದ ಮಧ್ಯೆ ಕ್ಯಾಂಪ್

ಆಷಾಢ ಮಾಸದ ಹಿನ್ನೆಲೆಯಲ್ಲಿ ಶೂಟಿಂಗ್​ ಶೆಡ್ಯೂಲ್ ಬ್ರೇಕ್ ಆಗಿದ್ದು, ನಟ ದರ್ಶನ್ ಎಂದಿನಂತೆ ತನ್ನ ಗಜಪಡೆಯೊಂದಿಗೆ ಸುಮಾರು ನಾಲ್ಕೈದು ಕಾರ್​​ ಹಾಗೂ ಜೀಪ್​ಗಳಲ್ಲಿ ಹಾಫ್ ರೋಡ್ ಟ್ರಿಪ್ ಮಾಡಿದ್ದಾರೆ. ಮಡಿಕೇರಿಯ ವಿರಾಜಪೇಟೆಯ ದಟ್ಟ ಅರಣ್ಯದ ಮಧ್ಯೆ ಕ್ಯಾಂಪ್ ಹಾಕಿ, ಒಂದೆರಡು ದಿನ ಕಳೆದು ಬಂದಿದ್ದಾರೆ.

ಇದನ್ನೂ ಓದಿ : ಇಂದು ‘ದಾಸ ದರ್ಶನ್’ ರೋಡ್ ಶೋ ಎಲ್ಲೆಲ್ಲಿ? ಇಲ್ಲಿದೆ ವೇಳಾಪಟ್ಟಿ

ಫಸ್ಟ್ ಟೈಮ್ ಪುತ್ರನೊಂದಿಗೆ ಟ್ರಿಪ್

ದರ್ಶನ್ ಪುತ್ರ ವಿನೀಶ್ ತೂಗುದೀಪ, ಸೌಂದರ್ಯ ಜಗದೀಶ್ ಪುತ್ರ, ಗರಡಿ ಚಿತ್ರದ ನಟ ಯಶಸ್ ಸೂರ್ಯ ಸೇರಿದಂತೆ ಸಾಕಷ್ಟು ಮಂದಿ ಈ ಟ್ರಿಪ್​ನಲ್ಲಿ ಭಾಗಿಯಾಗಿದ್ದಾರೆ. ಕಾಲ್ನಡಿಗೆಯಲ್ಲೇ ಅಂತಹ ಜಾಗಕ್ಕೆ ತೆರಳೋದು ಕೊಂಚ ಕಷ್ಟ. ಅಂಥದ್ರಲ್ಲಿ ಇವರು ಕಾರು, ಜೀಪ್​ಗಳ ಸಮೇತ ಅಲ್ಲಿಗೆ ಧಾವಿಸಿ, ಸಣ್ಣದೊಂದು ರಿಲ್ಯಾಕ್ಸ್ ಮಾಡಿ ಬಂದಿದ್ದಾರೆ.

ಸದ್ಯದಲ್ಲೇ ಕಾಟೇರ ಮತ್ತಷ್ಟು ಅಪ್ಡೇಟ್ಸ್

ಕನಿಷ್ಟ ತಿಂಗಳಿಗೊಂದು ಟ್ರಿಪ್ ಮಾಡೋ ಅಂತಹ ಗಜಪಡೆ, ಹೀಗೆ ಕಾಂಕ್ರೀಟ್ ಕಾಡಿನಿಂದ ಹೊರ ಹೋಗಿ, ಅಸಲಿ ಪ್ರಕೃತಿಯಲ್ಲಿ ಬೆರೆಯೋ ಕಾರ್ಯ ನಿಜಕ್ಕೂ ಅದ್ಭುತ ಅನುಭನ ನೀಡಲಿದೆ. ಸದ್ಯ ಕಾಟೇರ ಸಿನಿಮಾ ಬಹುದೊಡ್ಡ ನಿರೀಕ್ಷೆ ಮೂಡಿಸಿದ್ದು, ತರುಣ್-ದರ್ಶನ್ ಕಾಂಬಿನೇಷನ್ ಆಗಿರೋದ್ರಿಂದ ಸಹಜವಾಗಿಯೇ ಕ್ರೇಜ್ ಡಬಲ್ ಆಗಿದೆ. ನೆಲಮಂಗಲದ ಬರದಿಪಾಳ್ಯದ ಬಳಿ ಶೂಟಿಂಗ್ ನಡೆಸುತ್ತಿರುವ ಕಾಟೇರ, ಸದ್ಯದಲ್ಲೇ ಮತ್ತಷ್ಟು ಅಪ್ಡೇಟ್ಸ್​ನ ನೀಡಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES