Monday, December 23, 2024

ಇವಾಗ ಕಾಂಗ್ರೆಸ್ ನವ್ರು ಪ್ರಾಮಾಣಿಕತೆಯನ್ನು ಸಾಬೀತು ಪಡಿಸಿಕೊಳ್ಳಬೇಕು : ಸಿ.ಟಿ ರವಿ

ಬೆಂಗಳೂರು : ಬಿಜೆಪಿ ಅವಧಿಯ ಎಲ್ಲ ಕಾಮಗಾರಿಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇವಾಗ ಕಾಂಗ್ರೆಸ್ ನವ್ರು ಪ್ರಮಾಣೀಕರು ಅಲ್ವಾ? ಎಂದು ಪ್ರಶ್ನಿಸಿದರು.

ನಮಗೆ ಇದ್ದ ಅವಕಾಶ ಹೋಗಿದೆ. ಅವ್ರು ಇವಾಗ ಪ್ರಾಮಾಣಿಕತೆಯನ್ನು ಸಾಬೀತು ಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವ್ರು ಪರಮ ಭ್ರಷ್ಟರು ಎಂದು ಸಾಬೀತು ಆಗುತ್ತದೆ. ಇವಾಗ ಕಾಂಗ್ರೆಸ್ ನವ್ರು ಪ್ರಮಾಣೀಕರು ಅಲ್ವಾ? ಎಂದು ಕುಟುಕಿದರು.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿ : ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ

ಅವ್ರ ಸಾಮರ್ಥ್ಯವನ್ನು ತೋರಿಸಲಿ

ಒಂದು ತಿಂಗಳಲ್ಲಿ ಅರ್ಕಾವತಿ ಹಗರಣದ ಆರೋಪಿಗಳನ್ನು ಜೈಲಿಗೆ ಕಳುಹಿಸಲಿ. 8,000 ಕೋಟಿ ಹಣವನ್ನು ಅವ್ರು ಬೊಕ್ಕಸಕ್ಕೆ ತುಂಬಿಸಿಕೊಳ್ಳಲಿ. ಇವಾಗ ಅವ್ರು ಅವರ ಸಾಮರ್ಥ್ಯವನ್ನು ತೋರಿಸಲಿ ಎಂದು ಸಿ.ಟಿ ರವಿ ಸವಾಲು ಹಾಕಿದರು.

ಸ್ವಪಕ್ಷ ನಾಯಕರ ವಿರುದ್ಧವೇ ಬಿಜೆಪಿ ನಾಯಕರ ಹೇಳಿಕೆ ಕುರಿತು ಮಾತನಾಡಿ, ಕೆಲವು ವಿಷಯಗಳನ್ನು ಎಲ್ಲಿ ಮಾತಾಡಬೇಕು ಎಂಬ ಪರಿಜ್ಞಾನ ಬೇಕಾಗಿರುತ್ತದೆ. ಹೊರಗಿನ ವಿಷಯಗಳು ಬಂದಾಗ ಹೊರಗೆ ಮಾತಾಡಬೇಕು. ಒಳಗಿನ ವಿಷಯಗಳು ಬಂದಾಗ ಪಕ್ಷದ ಒಳಗೆ ಮಾತಾಡಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES