Sunday, December 22, 2024

ಮಹಾರಾಷ್ಟ್ರ ಬಳಿ ಭೀಕರ ಅಪಘಾತ : ಕಲಬುರಗಿ ಜಿಲ್ಲೆಯ 7 ಮಂದಿ ದುರ್ಮರಣ

ಕಲಬುರಗಿ : ಟ್ಯಾಂಕರ್ ಹಾಗೂ ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಲಬುರಗಿ ಜಿಲ್ಲೆಯ 7 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಶಿರವಾಡಿ ಬಳಿ ನಡೆದಿದೆ.

ಲಲಿತಾಬಾಯಿ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ ಪೂಜಾರಿ (40), ಸುಂದರಾಬಾಯಿ ಭರತಸಿಂಗ ರಜಪೂತ (55), ಸಾಹಿನಾಥ ಗೋವಿಂದ ಪೂಜಾರಿ (10) ಸಂಗೀತ ಮದನ ಗಾನೆ (35) ಛಾಯಾ ಹನುಮಾನ ನನವರೆ (46) ಮೃತರು.

ಮೃತರನ್ನು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಅಣೂರ ನಿವಾಸಿಗಳು ಎಂದು ಗುರುತಿಸಲಾಗಿದೆ. ಕ್ರೂಸರ್ ವಾಹನದಲ್ಲಿ ಮಹಾರಾಷ್ಟ್ರದ ತೀರ್ಥ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಎರಡು ಕ್ರೂಸರ್‌ನಲ್ಲಿ 25ಕ್ಕೂ ಅಧಿಕ ಜನ ತೆರಳಿದ್ದರು. ವಾಪಸಾಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಅಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆರು ಜನರ ಸ್ಥಿತಿ ಗಂಭೀರ

ಘಟನೆಯಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದೆ. ಮಹಾರಾಷ್ಟ್ರದ ಸೋಲಾಪುರ ಪಟ್ಟಣದ ಛತ್ರಪತಿ ಮಹಾರಾಜ್ ಆಸ್ಪತ್ರೆಯ ಐಸಿಯುನಲ್ಲಿ ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ನಾಳೆ ಬೆಳಗ್ಗೆ ಮೃತರ ದೇಹಗಳು ಕಲಬುರಗಿಯ ಅಣೂರ ಸ್ವಗ್ರಾಮಕ್ಕೆ ಬರುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES