Wednesday, January 22, 2025

ಆಸಿಡ್ ದಾಳಿಗೊಳಗಾದ ಸಂತ್ರಸ್ತೆಗೆ ಕೆಲಸ ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ತಮ್ಮ ಜನತಾ ದರ್ಶನವನ್ನು ಕೈಗೊಂಡು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರ ಅಹವಾಲುಗಳನ್ನು ಆಲಿಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಅಹವಾಲು ಹೊತ್ತು ಬಂದಿದ್ದ ಯುವತಿಗೆ ತಮ್ಮ ಸಚಿವಾಲಯದಲ್ಲಿಯೇ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಸಿದ್ದರಾಮಯ್ಯನವರು ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ : ಬಿಎಂಟಿಸಿಯ 56 ತರಬೇತಿ ವಾಹನಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರು ನಿಶಾನೆ

2022ರ ಏಪ್ರಿಲ್ 28 ರಂದು ಆಸಿಡ್ ದಾಳಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಸ್ನಾತಕೋತ್ತರ ಪದವೀಧರ ಸಂತ್ರಸ್ತೆ ತಮ್ಮ ತಂದೆ.ತಾಯಿಯ ಜೊತೆಗೆ ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು.

ಅಲ್ಲದೆ ಹಿಂದಿನ ಬೊಮ್ಮಾಯಿ ಸರ್ಕಾರದಲ್ಲೂ ಮನವಿ ಮಾಡಿದ್ದ ಯುವತಿಗೆ ಕೇವಲ ಭರವಸೆ ಅಷ್ಟೇ ಸಿಕಿತ್ತೂ, ಆದರೆ ಉದ್ಯೋಗ ಮಾತ್ರ ದೊರೆತಿರಲಿಲ್ಲ ಎಂದು ಯುವತಿ ಅಳಲು ತೋಡಿಕೊಂಡರು.

ಈ ಯುವತಿಯ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾನವೀಯತೆ ಆಧಾರದಲ್ಲಿ ಕೆಲಸ ನೀಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ತಿಳಿಸಿದರು.

RELATED ARTICLES

Related Articles

TRENDING ARTICLES