ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸರ್ಕಾರ ನೀಡಿದ ಭರವಸೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಅಕ್ಕಿ ನೀಡಲು ಸಾದ್ಯವಾಗದ ಕಾರಣ 5 ಅಕ್ಕಿ ನೀಡಲಾಗುವುದು, ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ಕೂಡ ರೆಡಿ ಇದ್ದೇವೆ ಎಂದು ಹೇಳಿದರು.
5 ಕೆ.ಜಿ ಜೊತೆಗೆ ತಲಾ 170 ರೂ. ಸಿಗೋದು ಖಚಿತ
ಪ್ರತಿ ಕೆಜಿ ಅಕ್ಕಿಗೆ 34 ರೂ.ನಂತೆ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಯ ಹಣ ಸಿಗುತ್ತೆ. ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ, ಪ್ರತಿ ಕೆಜಿಗೆ 34 ರೂ.ನಂತೆ 25 ಕೆಜಿಗೆ 850 ರೂ. ಸಿಗುತ್ತದೆ. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಅಕ್ಕಿ ಸಿಕ್ಕ ಕೂಡಲೇ ಕೊಡುವ ವ್ಯವಸ್ಥೆ ಮಾಡುತ್ತೇವೆ. ಎಮದಿದ್ದಾರೆ.
ಮನೆ ಯಜಮಾನಿ ಅಕೌಂಟ್‌ಗೆ ಬರುತ್ತೆ ಹಣ
ರೇಷನ್ ಕಾರ್ಡ್ನಲ್ಲಿ ಯಾರು ಮುಖ್ಯಸ್ಥರಿದ್ದಾರೋ ಅವರ ಅಕೌಂಟ್‌ಗೆ ಹಣ ಹಾಕುತ್ತೇವೆ. ಬಹುತೇಕ ಮಂದಿ ಬ್ಯಾಂಕ್ ಖಾತೆ (BankAccount) ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
BPL ಕಾರ್ಡ್‌ಗೆ ಆಧಾರ್ ಲಿಂಕ್ ಆಗಿರುವ ಅಕೌಂಟ್‌ಗೆ ಹಣ
ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗಿರುವವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತೇವೆ ನಾವು ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಜುಲೈ.1ರಿಂದ ಈ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು.