Wednesday, January 22, 2025

ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕ್ಬೇಕು : ಸಚಿವ ದಿನೇಶ್​ ಗುಂಡೂರಾವ್ ಕಿಡಿ

ಬೆಂಗಳೂರು: ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು ಎಂಬ ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ವಿಚಾರವಾಗಿ ಸಚಿವ ದಿನೇಶ್​ ಗುಂಡೂರಾವ್​​ರವರು ಟ್ವೀಟ್​​​ ಮೂಲಕ ಕಿಡಿಕಾರಿದ್ದಾರೆ

ಹೌದು, ಸಚಿವ ದಿನೇಶ್​ ಗುಂಡೂರಾವ್ ಸರಣಿ ಟ್ವೀಟ್​ನಲ್ಲಿ ನಿಮ್ಮ ಹೊಟ್ಟೆಯೊಳಗಿನ ಸಂಕಟ, ಬೇಗುದಿ ಏನೆಂದೇ ಅರ್ಥವಾಗುತ್ತಿಲ್ಲ.. ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ಬೊಬ್ಬೆ ಹೊಡೆಯುತ್ತಿದ್ರಿ.. ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಅಲ್ಲಿಯೂ ಹುಳುಕು‌ ಹುಡುಕುತ್ತಿದ್ದೀರಿ ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಂತಿಮ ಘಟ್ಟ ತಲುಪಿದೆ,ಫೆವಿಕಲ್ ಹಚ್ಚಿದ್ರೂ ಅಂಟಲ್ಲ : ಸಚಿವ ಎಂ ಬಿ ಪಾಟೀಲ್

ನಾವು ದುಡ್ಡು ಕೊಡುತ್ತೀವಿ ಎಂದರೂ ಕೇಂದ್ರ ಅಕ್ಕಿ ಕೊಡಲಿಲ್ಲ.. ಕೇಂದ್ರಕ್ಕೆ ಕೊಡುವ ದುಡ್ಡನ್ನೇ ನಾವೀಗ ಜನರಿಗೆ ಕೊಡುತ್ತಿದ್ದೇವೆ.. ನಿಮ್ಮ ಪಕ್ಷದವರಿಗೆ ಅನ್ನಭಾಗ್ಯ ಯೋಜನೆ ಅನುಷ್ಠಾನ ಇಷ್ಟವಿಲ್ಲ.. ಹಾಗಾಗಿ ಅಕ್ಕಿ ಸಿಗದಂತೆ ಮಾಡಿದಿರಿ.. ಅಕ್ಕಿಯ ಬದಲು ದುಡ್ಡು ಕೊಡುತ್ತಿರುವುದು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ.. ನೀವು ಅಧಿಕಾರದಲ್ಲಿದ್ದಾಗ ಜನರಿಗೆ ಒಳ್ಳೆಯದು ಮಾಡಲಿಲ್ಲ.. ನಿಮ್ಮ ಕೈಲಾಗದ್ದನ್ನು ನಾವು ಮಾಡುತ್ತಿದ್ದೇವೆ.. ಇದಕ್ಯಾಕೆ ಹೊಟ್ಟೆಕಿಚ್ಚು? ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕೆ ಎಂದು ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES