Wednesday, January 22, 2025

Eid-ul-Adha 2023 : ಬಕ್ರೀದ್​​ಗೆ​ ಶುಭಕೋರಿದ ರಾಷ್ಟ್ರಪತಿ, ಪ್ರಧಾನಿ

ಬೆಂಗಳೂರು: ಇಂದು ಭಾರತದಲ್ಲಿ ಈದ್​ ಉಲ್​ ಅಧಾ ಹಬ್ಬವನ್ನೂ ಮುಸ್ಲಿಂ ಬಾಂದವರು ಸಂಭ್ರಮದಿಂದ ಆಚರಿಸುತ್ತಾರೆ. ಇದು ಅವರ ಧರ್ಮದ ಎರಡನೇ ಹಬ್ಬ. ಈ ಹಬ್ಬ ತ್ಯಾಗದ ಸಕೇತಿಕ ಹಬ್ಬವಾಗಿದೆ.

ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ.ಈ ಹಬ್ಬದಂದು ದೇಶದ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವಿಟರ್​​ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ

ದೇಶದ ರಾಷ್ಟ್ರಪತಿ ಕೂಡ ದೇಶದ ಇಸ್ಲಾಂ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈದ್-ಉಜ್-ಜುಹಾ ಈ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಮುಸ್ಲಿಂ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಎಂದು ಟ್ವೀಟ್​ ಮಾಡಿದ್ದಾರೆ.

ದೇಶದ ಇಸ್ಲಾಂ ಸಮುದಾಯದ ಜನತೆಗೆ ಈದ್-ಉಲ್-ಅಧಾದ ಶುಭಾಶಯಗಳು. ಈ ದಿನ ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಇದು ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯದ ಮನೋಭಾವವನ್ನು ಎತ್ತಿ ಹಿಡಿಯಲಿ ಈದ್ ಮುಬಾರಕ್ ಎಂದು ಟ್ವಿಟರ್​​ ಮೂಲಕ ಪ್ರಧಾನಿ ಮೋದಿ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

 

 

RELATED ARTICLES

Related Articles

TRENDING ARTICLES