Sunday, January 19, 2025

Instagramನಲ್ಲಿ ಪರಿಚಯ, ಮದುವೆ ನೆಪದಲ್ಲಿ ಯುವತಿ ಮೇಲೆ 20 ದಿನ ಅತ್ಯಾಚಾರ

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ 20 ದಿನಗಳ ನಿರಂತರವಾಗಿ ಅತ್ಯಾಚಾರ ಎಸಗಿದ ಪ್ರೇಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಡಬ ಮೂಲದ ಅನೀಶ್ ರೆಹಮಾನ್ ಬಂಧಿತ ವ್ಯಕ್ತಿ. ಈತ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧಿತನಾಗಿದ್ದನು.

ಸಂತ್ರಸ್ಥ ಯುವತಿ ಬಂಟ್ವಾಳ ಮೂಲದವರು. ಈಕೆ ಮಂಗಳೂರಿನಲ್ಲಿ ಸ್ನಾತಕೋತ್ತರ ವ್ಯಾಸಂಗ‌ ಮಾಡುತ್ತಿದ್ದಳು. ಇದನ್ನರಿತಿದ್ದ ಆರೋಪಿ ಅನೀಶ್ ರೆಹಮಾನ್ ಇನ್ಸ್ಟಾಗ್ರಾಮ್ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು.

ಇದನ್ನೂ ಓದಿ : ಅಪಾರ್ಟ್‍ಮೆಂಟ್​ನ 10ನೇ ಮಹಡಿಯಿಂದ ಹಾರಿ ಮಹಿಳೆ ಸಾವು

ಇಬ್ಬರ ನಡುವ ಪ್ರೇಮಾಂಕುರ

ಪರಿಚಯ ಸ್ನೇಹವಾಗಿ, ಬಳಿಕ ಇಬ್ಬರ ನಡುವ ಪ್ರೇಮಾಂಕುರವಾಗಿತ್ತು. ಪ್ರೀತಿ ಮುಂದುವರೆದು ಯುವತಿಯನ್ನು ಲಾಡ್ಜ್​​ಗೆ ಕರೆದೊಯ್ದು 20 ದಿನಗಳ ಕಾಲ ದೈಹಿಕ ಸಂಪರ್ಕ ನಡೆಸಿದ್ದ. ಯುವತಿ ನೀಡಿನ ದೂರಿನ ಮೇರೆಗೆ ಪೊಲೀಸರು ಆರೋಪಿ ಅನೀಶ್ ರೆಹಮಾನ್​​ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅನೀಶ್ ರೆಹಮಾನ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 506, 417 ಹಾಗೂ 376 ರಡಿ ಪ್ರಕರಣ ದಾಖಲಾಗಿತ್ತು. ಜೂನ್ 26 ರಂದು ಈತನನ್ನು ಬಂಧಿಸಲಾಗಿತ್ತು. ಜೂನ್ 27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

RELATED ARTICLES

Related Articles

TRENDING ARTICLES