ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗೆ ಅಧಿಕಾರಿಗಳೇ ಅಡ್ಡಿಯಾಗಿದ್ದು, KKRDB ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಹೌದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಸರ್ಕಾರ ನೀಡಿದ ಕೋಟಿ ಕೋಟಿ ಹಣ ವೇಸ್ಟ್ ಆಗುತ್ತಿದೆ. ಜೇವರ್ಗಿ, ಲಿಂಗಸಗೂರು, ಮಾನವಿ ಮತ್ತು ರಾಯಚೂರ ತಾಲ್ಲೂಕುಗಳಲ್ಲಿ ಶೇ.70ಕ್ಕಿಂತಲೂ ಕಡಿಮೆ ಅನುದಾನವನ್ನ ಬಳಕೆ ಮಾಡಿದ್ದು, 19 ತಾಲ್ಲೂಕುಗಳಲ್ಲಿ ಶೇ.80 ಕ್ಕಿಂತಲೂ ಕಡಿಮೆ ಅನುದಾನ ಬಳಕೆ ಮಾಡಿದ್ದಾರೆ.
ಇದನ್ನೂ ಓದಿ: Eid-ul-Adha 2023 : ಬಕ್ರೀದ್ಗೆ ಶುಭಕೋರಿದ ರಾಷ್ಟ್ರಪತಿ, ಪ್ರಧಾನಿ
2013-14 ರಿಂದ 2021-22ನೇ ವರ್ಷದ ವರೆಗೆ 5,685 ಕೋಟಿ ಅನುದಾನವನ್ನ ಕೆಳಸ್ತರದ ನಿಧಿಗೆ ಹಂಚಿಕೆ ಮಾಡಲಾಗಿತ್ತು. ಈ ಹಣವನ್ನ ಅಭಿವೃದ್ದಿ ಹೊಂದದ ತಾಲ್ಲೂಕುಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ನೀಡಲಾಗಿತ್ತು.ಹಂಚಿಕೆಯಾದ ಹಣದ ಪೈಕಿ 2,600 ಕೋಟಿಗೂ ಹೆಚ್ಚು ಅನುದಾನ ಬಳಕೆಯಾಗದೇ ಖಜಾನೆಯಲ್ಲೆ ಉಳಿದಿರುವುದು ಬಯಲಿಗೆ ಬಂದಿದೆ.
ಲೆಕ್ಕ ತಪಾಸಣೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳಿಗೆ ಮೂಗುದಾರ ಹಾಕಬೇಕಿದ್ದ ಶಾಸಕರು, ಸಂಸದರು, ಜಿಲ್ಲಾ ಮಂತ್ರಿಗಳು ಮೌನವಾಗಿದ್ದಾರೆ.