ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಸೋಲಿನ ನಂತರ ನಮ್ಮ ಪಕ್ಷದಲ್ಲಿ ಒಳ ಸಂಘರ್ಷಗಳು,ಕಲಹಗಳು ಹೆಚ್ಚಾಗುತಿದ್ದು, ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಹೌದು, ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ ” ಬಿಜೆಪಿ ರಾಜ್ಯಾಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು.
— M P Renukacharya (@MPRBJP) June 28, 2023
ಭಾರತೀಯ ಜನತಾ ಪಕ್ಷ ನನಗೆ ತಾಯಿ ಸಮಾನ
ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ನನಗೆ ಎಲ್ಲಾ ಸ್ಥಾನ ಮಾನ ನೀಡಿರುವುದು ನನ್ನ ಪಕ್ಷ ಪಕ್ಷಕ್ಕೆ ಹೀನಾಯ ಸೋಲಾದಾಗ ನಾವೆಲ್ಲರೂ ಸತ್ಯಸಂಗತಿಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲೇಬೇಕು. ಜನತಾ ನ್ಯಾಯಾಲಯದಲ್ಲಿ ಜನರು ತೀರ್ಪು ನೀಡಿದ್ದಾರೆ ಅದಕ್ಕೆ ನಾವು ತೆಲೆಬಾಗಲೇಬೇಕು.ಅದೇ ಜನಸಾಮಾನ್ಯರು ತಿಳಿಸಿದ ಅಭಿಪ್ರಾಯವನ್ನು ನಾನು ತಿಳಿಸುತ್ತಿದ್ದೇನೆ ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಸಮಯದಲ್ಲಿ ಹಿರಿಯರನ್ನು ಕಡೆಗಣಿಸಿದ್ದು ಬಿಜೆಪಿಗೆ ನಷ್ಟವಾಯಿತು
ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು ಎಂದು ರೇಣುಕಾಚಾರ್ಯ ಅವರು ಹೇಳಿದ್ದಾರೆ.
ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯೆಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು.
— M P Renukacharya (@MPRBJP) June 28, 2023