Wednesday, January 22, 2025

ಸ್ವಪಕ್ಷೀಯರ ವಿರುದ್ಧವೇ ಬೆಂಕಿಯುಗುಳಿದ ರೇಣುಕಾಚಾರ್ಯ

ದಾವಣಗೆರೆ : ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ. ಸೋಲು ಗೆಲುವಿನ ಲೆಕ್ಕಾಚಾರ ಸಹ ಮುಗಿದಿದೆ. ಆದರೆ, ಬಿಜೆಪಿ ಸೋಲಿಗೆ ಸ್ವಪಕ್ಷೀಯರ ಮೇಲೆಯೇ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಬೆಂಕಿಯುಗುಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮತ್ತೆ ತಮ್ಮ ಆಕ್ರೋಶ ಹೊರಹಾಕಿದರು. ಪಕ್ಷದ ಈ ಹೀನಾಯ ಸ್ಥಿತಿಗೆ ಅಥಿರತಮಹಾರಥರೇ ಕಾರಣ ಅಂತ ವಾಗ್ದಾಳಿ ನಡೆಸಿದರು.

ಅಧಿಕಾರದಲ್ಲಿ ಇದ್ದ ಬಿ.ಎಸ್ ಯಡಿಯೂರಪ್ಪ ಇಳಿಯುವ ವರೆಗೂ ಇವರು ಬಿಡಲಿಲ್ಲ. ಯಡಿಯೂರಪ್ಪರನ್ನು ಇಳಿಸಲೇಬೇಕೆಂದು ಕೆಲವರನ್ನು ಮಾತಾಡಿಸೋಕ್ಕೆ ಬಿಟ್ರು. ಇದು ಯಾವ ಪುರುಷಾರ್ಥಕ್ಮಾಗಿ? ವೋಟು ಕೇಳೋಕೆ ಯಡಿಯೂರಪ್ಪರ ಮುಖ ಬೇಕು. ಅಧಿಕಾರದ ಎಂಜಾಯ್ ಮಾಡಲು ಯಡಿಯೂರಪ್ಪ ಬೇಡವಾ? ಎಂದು ಗುಡುಗಿದರು.

ಪಕ್ಷವನ್ನೇ ಹಾಳು ಮಾಡಿದ್ರು

ಯಡಿಯೂರಪ್ಪ ಅಧಿಕಾರದಿಂದ ಇಳಿದೆ ಇದ್ದಿದ್ರೆ ನಾವು ನಮ್ಮಪ್ಪಾರಣೆಗೂ ಅಧಿಕಾರದಿಂದ ಇಳಿಯೋಕೆ ಆಗ್ತಿರಲಿಲ್ಲ. ಆದರೆ, ಸಂಚು ಹೂಡಿ ಅವರನ್ನು ಕೆಳಗಿಳಿಸಿದರು. ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಎಲ್ಲರನ್ನು ಮುಗಿಸುವ ಮೂಲಕ ಪಕ್ಷವನ್ನೇ ಹಾಳು ಮಾಡಿದ್ರು. ನಾನು ಸೋತಿರಬಹುದು ಆದ್ರೆ, ಪಕ್ಷದಲ್ಲಿ ಆದ ಕೆಲ ವ್ಯವಸ್ಥೆಗಳೇ ನಮ್ಮ ಸೋಲಿಗೆ ಕಾರಣ ಎಂದರು.

ಇದನ್ನೂ ಓದಿ : ಪಾತಾಳದಲ್ಲಿದ್ದ ಕಾಂಗ್ರೆಸ್ಸನ್ನು ನಾನು ಮೇಲಕ್ಕೆತ್ತಿದ್ದೇನೆ : ಡಿಕೆಶಿ ಅಸಮಾಧಾನ

ನಿಮ್ಮ ಬಾಯಿಗೆ ಏನ್ ಉಳ ಬಿದ್ದಿತ್ತು

ನನಗೆ ಯಾವುದೇ ಭಯವಿಲ್ಲ. ನಾನು ನಿರ್ಭಯವಾಗಿ ಮಾತನಾಡುವೆ. ಕೆಲವರು ಒಂದು ಗ್ರಾಮ ಪಂಚಾಯ್ತಿ ನಿಂತು ಗೆಲ್ಲೋಕೆ ಆಗಲ್ಲ. ಅವರು ನಮ್ಗೆ ಮಾರ್ಗದರ್ಶನ ನೀಡ್ತಾರೆ. ಆ ವ್ಯಕ್ತಿ ಯಾರು ಅಂದ್ರೆ ಅವರ ಹೆಸರು ಇವಾಗ ನಾನು ಹೇಳಲ್ಲ. ಸಮಯ ಬಂದಾಗ ಅವರ ಹೆಸರು ಹೇಳ್ತೀನಿ. ಕೊವೀಡ್ ಟೈಮ್ ನಲ್ಲಿ ರೇಣುಕಾಚಾರ್ಯ ಒಳ್ಳೆಯ ಕೆಲಸ ಮಾಡಿದ್ದ ಅಂತ ಹೇಳೋಕೆ ನಿಮ್ಮ ಬಾಯಿಗೆ ಏನು ಉಳ ಬಿದ್ದಿತ್ತು ಅಂತ ಛೇಡಿಸಿದರು.

ಸುಧಾಕರ್ ಒಬ್ಬನೆಯೇ ಸೋತಿರೋದು‌

ಸೋತಾಗ ಯಾರು ಸಹ ನಮಗೆ ಒಂದು ಕಾಲ್ ಮಾಡಲಿಲ್ಲ. ನಮ್ಮ ಮನೆ ಕಡೆಯೂ‌ ಬರಲಿಲ್ಲ. ಆದ್ರೆ, ಬೊಮ್ಮಯಿ ಅವರು ಸುಧಾಕರ್ ಮನೆಗೆ ಸಮಾಧಾನ ಹೇಳೊಕೆ ಹೋಗ್ತಾರೆ‌. ಸುಧಾಕರ್ ಒಬ್ಬನೆಯೇ ಸೋತಿರೋದು‌, ನಾವು ಯಾರು ಸೋಲು ಕಂಡಿಲ್ವಾ? ಎರಡು ಖಾತೆ ಕೊಟ್ಟಿಲ್ಲ ಅಂದ್ರೆ ಪಾರ್ಟಿ ಮುಗಿಸುತ್ತೇನೆ ಎಂದವನ ಮನಗೆ ನೀವು ಹೋಗ್ತಿರಿ‌ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES