Thursday, December 26, 2024

ಆ.11ರಂದು ಶಿವಮೊಗ್ಗದಿಂದ ಇಂಡಿಗೋ ವಿಮಾನ ಹಾರಾಟ : ಬಿ.ವೈ ರಾಘವೇಂದ್ರ

ಶಿವಮೊಗ್ಗ : ವೇಟ್ ಈಸ್ ಓವರ್. ಅಂತು ಶಿವಮೊಗ್ಗ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ಯಾವಾಗ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಮಾಡುತ್ತೆ ಅಂತ ದಿನ ಎಣಿಸುತ್ತಿದ್ದವರಿಗೆ ಸಂಸದ ಬಿ.ವೈ ರಾಘವೇಂದ್ರ ಸಿಹಿ ಸುದ್ದಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಪಯಣಿಸಲಿದೆ. ಬೆಂಗಳೂರು ಹೊರತುಪಡಿಸಿ ಇತರೆ ಸ್ಥಳಗಳಿಗೂ ಶಿವಮೊಗ್ಗದಿಂದ ವಿಮಾನ ತೆರಳಲಿದೆ. ಇತರೆ 4 ವಿವಿಧ ಸ್ಥಳಗಳಿಗೆ ಶಿವಮೊಗ್ಗದಿಂದ ಹಾರಾಟ ನಡೆಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಉದ್ಘಾಟನೆಗೆ ಸಿದ್ದಗೊಂಡ ವಿಜಯಪುರ ವಿಮಾನ ನಿಲ್ದಾಣ : ಉದ್ಘಾಟನೆ ಯಾವಾಗ?

11 ಸ್ಥಳಗಳಿಗೆ ವಿಮಾನ ಹಾರಾಟ

ನಾನು 11 ಸ್ಥಳಗಳಿಗೆ ವಿಮಾನ ಹಾರಾಟ ನಡೆಸಲು ಅನುಮತಿಗಾಗಿ ಪತ್ರ ಬರೆದಿದ್ದೆ. 2022ರಲ್ಲಿ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ದೆಹಲಿ, ಶಿವಮೊಗ್ಗ-ಚೆನೈ, ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಹೈದರಾಬಾದ್ ಗೆ ವಿಮಾನ ತೆರಳಲಿದೆ ಎಂದರು.

ಎಲ್ಲಿಲ್ಲಿಗೆ ವಿಮಾನ ಸಂಚಾರ

ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಬೆಂಗಳೂರಿಗೆ ಶಿವಮೊಗ್ಗದಿಂದ ವಿಮಾನ ಸಂಚರಿಸಲಿದೆ. ಇಂಡಿಗೋ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಖಾಸಗಿ ವಿಮಾನ ಸಂಸ್ಥೆಗಳಿಗೆ ಬಿಡ್ ಗಾಗಿ ಆಹ್ವಾನಿಸಿದೆ ಎಂದು ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES