ಬೆಂಗಳೂರು : ಬಿಜೆಪಿ ಪಕ್ಷ ಹತ್ತು ದಿಕ್ಕು ಆಗಿದೆ, ಒಂದಲ್ಲ ಇಪ್ಪತ್ತು ಗುಂಪುಗಳಾಗಿವೆ ಜೋಡಿಸಿದ್ರೂ ಜೋಡಿಸೋಕಾಗಲ್ಲ ಆ ರೀತಿ ಛಿದ್ರ ಛಿದ್ರವಾಗಿದೆ ಎಂದು ಬಿಜೆಪಿ ವಿರುದ್ದ ಬಿಜೆಪಿಯ ವಿರುದ್ದ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಹೊಡೆದಾಟ ಆಗುತ್ತಿದೆ. ಬಿಜೆಪಿ ಅಂತಿಮ ಘಟ್ಟ ತಲುಪಿದೆ ಬಿಜೆಪಿಗೆ ಫೆವಿಕಲ್ ಹಚ್ಚಿದ್ರೂ ಅದು ಅಂಟಲ್ಲ ಎಂದು ಲೇವಡಿ ಮಾಡಿದ್ದಾರೆ.
ಅನ್ನಭಾಗ್ಯದ ಕುರಿತು ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀವೇ ತಾನೇ ಹಣ ಕೊಡಿ ಎಂದು ಕೇಳಿದ್ದು ಈಗ ನಾವ್ಯಾಕೆ ಕ್ಷಮೆ ಕೇಳಬೇಕು? ನಮಗೆ ಹಿಂಟ್ ಕೊಟ್ಟಿದ್ದೇ ನೀವು ಎಂದು ಬೊಮ್ಮಾಯಿವರಿಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ಮದುವೆ ಆಗೋಕೆ ಕನ್ಯೆ ಸಿಗದೆ ಯುವಕ ಆತ್ಮಹತ್ಯೆ
ಈ ವಿಷಯದಲ್ಲಿ ಯತೀಂದ್ರ ಹೆಸರು ಯಾಕೆ ತರ್ತೀರಾ? ಅವ್ರ ಮೇಲೆ ಯಾಕೆ ಗೂಬೆ ಕೂರಿಸೋದು? ಪ್ರೂವ್ ಮಾಡಲಿ ಅದನ್ನ ಅಷ್ಟಕ್ಕೂ ಯತೀಂದ್ರ ಎಂಎಲ್ ಎ ಆಗಿದ್ದಾರಾ? ಎಂದು ಪ್ರಶ್ನಿಸಿದ ಅವರು ನೀವು ಹೋದ್ರೂ, ಅವ್ರು ಹೋದ್ರೂ ಕೊಡುತ್ತಾರೆ. ಅಲ್ಲದೆ ಎಂಎಲ್ ಎಗಳು ಹೋದಾಗ ಶಿಫಾರಸ್ಸು ಪತ್ರ ಕೊಟ್ಟೇ ಕೊಟ್ಟಿರುತ್ತಾರೆ. ಅದಕ್ಕೆ ಹಣದ ಲೇಪ ಕೊಡೋದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.
ಎಲ್ಲಾ ಸರ್ಕಾರದ ಅವಧಿಯಲ್ಲೂ ಪತ್ರದ ವ್ಯವಹಾರ ಆಗಿರುತ್ತದೆ. ಹಿಂದೆ ಕುಮಾರಸ್ವಾಮಿ ಸರ್ಕಾರದಲ್ಲಿ ಎರಡೆರಡು ಲೆಟರ್ ಕೊಟ್ಟಿರಲಿಲ್ವಾ? ಎಂದ ಅವರು ನಾನು ಕೂಡ ಆಗ ಸರ್ಕಾರದ ಭಾಗವಾಗಿದ್ದೆ ಸಹಜವಾಗಿ ನಿಯಮಾನುಸಾರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಬರೆದಿರುತ್ತೇವೆ. ಹಾಗಾದರೆ ಎಂ.ಬಿ.ಪಾಟೀಲ್ ಫ್ರಾಡ್ ಅಂತ ಹೇಳಲು ಸಾಧ್ಯನಾ ಎಂದು ಪ್ರಶ್ನಿಸಿದರು.