Friday, January 3, 2025

ಟ್ರಿಪ್ ಹೋದ ಹೆಂಡ್ತಿ ಬಂದಿಲ್ಲ ಅಂತ ಬಸ್ ಟೈರ್ ಗೆ ತಲೆ ಕೊಟ್ಟ ಗಂಡ

ಬೆಂಗಳೂರು: ಟ್ರಿಪ್ ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ ಎಂದು ಕುಡುಕ ಗಂಡನ ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಅವಾಂತರ ಸೃಷ್ಟಿಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಹೌದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ ಕುಡುಕ ಗಂಡನ ಪತ್ನಿ ಟ್ರಿಪ್ ಗೆ ಹೋದಗ ಹೆಂಡತಿ ಇನ್ನೂ ಮನೆಗೆ ಬಂದಿಲ್ಲ ಎಂದು ಕುಡುಕ ಗಂಡ ಟೈರ್ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ತಿನಿ ಅಂತ ಕಿರಿಕ್ ಮಾಡಿದ್ದಾನೆ.

ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ದಗಂಟೆಗೂ ಹೆಚ್ಚು ಕಾಲ ಕುಡುಕನ ಅವಾಂತರದಿಂದ ಬಸ್ ನಲ್ಲಿ‌ ಕುಳಿತ ಪ್ರಯಾಣಿಕರ ಪರದಾಟವಂತಹ ಪರಿಸ್ಥಿತಿ ಬಂದಿದೆ.

ಸರ್ಕಾರದ ವಿರುದ್ದ ಆಕ್ರೋಶ

ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ ಅಂತ ಕುಡುಕನ ವಾಗ್ದಾಳಿ ಮಾಡಿದ್ದಾನೆ. ನನ್ನ ಹೆಂಡತಿ ಟ್ರಿಪ್ ಗೆ ಹೋದವಳು‌ ಇನ್ನು ವಾಪಸ್ ಬಂದಿಲ್ಲ ಅಂತ ಸರ್ಕಾರದ ವಿರುದ್ದ ಸಿಡಿದಿದ್ದೇನೆ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕೆಂದು ಕುಡುಕನಿಂದ ಒತ್ತಾಯ ಹೇರಿದ್ದೇನೆ.

ಟೈರ್ ಗೆ ತಲೆಕೊಡಲು ಯತ್ನಿಸಿದ ಕುಡುಕನನ್ನು ಹೊರಗಡೆ ಎಳೆತಂದ ಸ್ಥಳಿಯರು ಹೊಸಕೋಟೆ ಪೊಲೀಸರಿಗೆ ‌ಒಪ್ಪಿಸಿದ್ದಾರೆ. ಕುಡುಕನ ಅವಾಂತರ ಇದೀಗ ವೈರಲ್​ ಆಗುತ್ತಿದೆ.

RELATED ARTICLES

Related Articles

TRENDING ARTICLES