Wednesday, December 25, 2024

ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ : ಬಿಜೆಪಿ ಕಾರ್ಪೋರೇಟರ್ ಅರೆಸ್ಟ್

ಕಲಬುರಗಿ : ನಗರದಲ್ಲಿ ಜೂಜು ಅಡ್ಡೆ ಮೇಲೆ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿ ಬಿಜೆಪಿ ಕಾರ್ಪೊರೇಟರ್ ಸಚೀನ್ ಕಡಗಂಚಿ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಕಲಬುರಗಿಯ ಆಳಂದ ಕಾಲೋನಿಯ ವಾರ್ಡ್ ಸಂಖ್ಯೆ 8ರ  ಬಿಜೆಪಿ ಕಾರ್ಪೊರೇಟೆರ್ ಆಗಿರುವ ಬಂಧಿತ ಜೂಜೂಕೋರ ಸಚೀನ್ ಕಡಗಂಚಿ, ನಗರದ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ಶೆಡ್‌ವೊಂದರಲ್ಲಿ ತನ್ನ ಸಹಚರರೊಂದಿಗೆ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿಕೊಂಡಿದ್ದ.

ಇದನ್ನೂ ಓದಿ : ಹೆಂಡ್ತಿ, ಮಗನನ್ನು ಸಮುದ್ರಕ್ಕೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಈ ವೇಳೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೋಲಿಸರು ಸಚೀನ್ ಕಡಗಂಚಿ, ವಿಶಾಲ್, ಆನಂದ್, ಮಹಾಂತೇಶ್, ಶಿವರಾಜ್, ಸಿದ್ದರಾಮ್, ಶರಣು ಸೇರಿದಂತೆ ಏಳು ಜನರು ಖಾಕಿ ಬಲೆಗೆ ಬಿದ್ದಿದ್ದಾರೆ.

ಬಂಧಿತರಿಂದ 1 ಲಕ್ಷ ರೂ ನಗದು ಹಣ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳನ್ನು ಜಪ್ತಿ ಮಾಡಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಸಂಸ್ಕ್ರತಿಯ ಬಗ್ಗೆ ಪಾಠ ಮಾಡುವ ಬಿಜೆಪಿಯಲ್ಲಿ ಇದೆಂಥ ಕೆಟ್ಟ ಸಂಸ್ಕ್ರತಿ ಎಂಬುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES