ಬಳ್ಳಾರಿ : ಗೃಹಲಕ್ಷ್ಮೀ ಹೆಸರಲ್ಲಿ ಗೋಲ್ ಮಾಲ್! ಗೃಹಲಕ್ಷ್ಮೀ ಯೋಜನೆ ಅಪ್ಲಿಕೇಶನ್ ಭರ್ತಿ ಹೆಸರಲ್ಲಿ ಹಣ ಪೀಕಿದ ಖದೀಮರು. ಒಂದು ಫಾರಂಗೆ 150 ರೂ. ಪಡೆದು ವಂಚಿಸಿದ ಖಾಸಗಿ ಏಜೆನ್ಸಿ.
ಈ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಇನ್ನೂ ಗೃಹಲಕ್ಷ್ಮೀ ಯೋಜನೆಗೆ ಅಪ್ಲಿಕೇಷನ್ ಬಿಟ್ಟಿಲ್ಲ. ಆಗಲೇ ಕೆಲವರು ಅಪ್ಲಿಕೇಷನ್ ಹಾಕ್ತೀವಿ ಅಂತ ಮನೆ-ಮನೆಗೆ ತೆರಳಿ ನೂರಾರು ಮಹಿಳೆಯರಿಂದ 150 ರೂ. ಪಡೆದು ವಂಚನೆ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ವಿವಿಧೆಡೆ ಖಾಸಗಿ ಏಜೆನ್ಸಿಯೊಂದು ಮಹಿಳೆಯರಿಂದ ವಸೂಲಿ ಮಾಡಿದೆ. ಖಾಸಗಿ ಏಜೆನ್ಸಿ ಅವರನ್ನು ಹಿಡಿದು ಪ್ರಶ್ನಿಸಿರುವ ಜನರು ತರಾಟೆ ತೆಗೆದುಕೊಂಡಿದ್ದಾರೆ. ದಿಶಾ ಒನ್ ಹೆಸರಲ್ಲಿ ಖಾಸಗಿ ಏಜೆನ್ಸಿಯವರು ಗೃಹಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಇತರೆ ಸ್ಕೀಂ ಫಾರಂ ತುಂಬುತ್ತೇವೆ ಎಂದು ಹಣ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ : ಇದು 60 ಪರ್ಸೆಂಟ್ ಕಮಿಷನ್ ಸರ್ಕಾರ : ನಳಿನ್ ಕುಮಾರ್ ಕಟೀಲ್
ಒಂದು ಫಾರಂ ತುಂಬಿಕೊಡಲು 150 ರೂಪಾಯಿ ಹಣ ಪಡೆದಿದ್ದಾರೆ. ಅರ್ಜಿ ಹಾಕುವ ಹೆಸರಲ್ಲಿ ಹಣ ಪೀಕಿದವರನ್ನ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ 2,000 ರೂ.
ಆಗಸ್ಟ್ ತಿಂಗಳಲ್ಲಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಹಾಕೇ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಯ ಕುರಿತು ಮಹತ್ವದ ಚರ್ಚೆಯಾಗಿದೆ. ನಿಖರವಾದ ದಿನಾಂಕದ ಜೊತೆಗೆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ಜು ಜುಲೈ 3 ರಂದು ನೀಡಲಾಗುವುದು ಎಂದು ತಿಳಿಸಿದ್ದಾರೆ.