Thursday, December 26, 2024

ಹೆಂಡ್ತಿ, ಮಗನನ್ನು ಸಮುದ್ರಕ್ಕೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಉದ್ಯಮಿ

ಕಾರವಾರ : ಹೆಂಡತಿ ಹಾಗೂ ಮಗನನ್ನು ಸಮುದ್ರಕ್ಕೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.

ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್​ ಪಾಟೀಲ್​​(40), ಜ್ಯೋತಿ ಪಾಟೀಲ್​​(35), ದಕ್ಷ​​ ಪಾಟೀಲ್(12) ಮೃತರು. ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತ ಶ್ಯಾಮ್​ ಪಾಟೀಲ್ ಅವರು ಗೋವಾದ ಕುಕ್ಕಳ್ಳಿಯಲ್ಲಿ ವಾಸವಿದ್ದರು. ಮೃತ ಪತ್ನಿ ಮತ್ತು ಮಗನ ಮೃತ‌ದೇಹ ಕಾರವಾರದ ದೇವಭಾಗ ಸಮುದ್ರ ಕಡಲತೀರದಲ್ಲಿ ಪತ್ತೆಯಾಗಿದೆ. ಪತಿ ಶ್ಯಾಮ್ ಶವ ಗೋವಾದ  ಕುಕಳ್ಳಿಯ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಓದನ್ನೂ ಓದಿ : ಜಸ್ಟ್ 485 ರೂಪಾಯಿಗೆ ಇಬ್ಬರನ್ನು ಕೊಂದ ಗಾಂಜಾ ವ್ಯಸನಿ

ಮೃತ ಶ್ಯಾಮ್ ಪಾಟೀಲ್ ಅವರು ಗೋವಾ ವೆರ್ನಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ಹೊಂದಿದ್ದರು. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್ ಹಿಂಭಾಗ ಶವ ಪತ್ತೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಬಾರ್ ಹಿಂಭಾಗದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮದ್ಯ ವ್ಯಸನಿ ಓಂಕೇಶ್ (52) ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿ.ಎಸ್.ಐ. ಪ್ರವೀಣ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES