Sunday, December 22, 2024

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿ ಮೂಲೆಗುಂಪು ಮಾಡಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಬಿ.ಎಸ್ ಯಡಿಯೂರಪ್ಪ ರಿಟೈರ್ಡ್ ಆಗಿದ್ದಾರಲ್ಲ, ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲು ಬಜೆಪಿ ಅವ್ರಿಗೆ ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸುವುದಕ್ಕೆ ಹೇಳಿ ಎಂದು ಟಾಂಗ್ ಕೊಟ್ಟರು.

ಇಲ್ಲಿ ಮಾತಾಡಿ ಶೂರರಾಗಲು ಹೊರಟಿದ್ದಾರೆ. ಪ್ರತಿಭಟನೆ ಮಾಡುವುದಾದರೆ ಪಾರ್ಲಿಮೆಂಟ್ ಎದುರು ಮಾಡಲಿ. ಅಲ್ಲಿ ಮಾತಾಡಿ ಶೂರರಾಗಲಿ ಅವರು. ಯಡಿಯೂರಪ್ಪ ರಿಟೈರ್ಡ್ ಆಗಿದ್ದಾರಲ್ವಾ? ಅಧಿವೇಶನದಂದು ಪ್ರತಿಭಟನೆ ಮಾಡುವುದಾಗಿ ಹೇಳ್ತಾರೆ. ಇಂಥ ವಿಕೃತ ಹೇಳಿಕೆಗಳನ್ನು ಕೊಡುವುದನ್ನು ಬಿಜೆಪಿಯವರು ಬಿಡಬೇಕು ಎಂದು ಛೇಡಿಸಿದರು.

ಇದನ್ನೂ ಓದಿ : ಅಕ್ಕಿ ಬದಲು ಹಣ ನೀಡುವ ಕೈ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಖಂಡನೆ

ಕೋವಿಡ್ ಅವ್ಯವಹಾರದ ಬಗ್ಗೆ ತನಿಖೆ

ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ. ಕೋವಿಡ್-19 ಅವ್ಯವಹಾರದ ಬಗ್ಗೆಯೂ ತನಿಖೆ ಮಾಡುತ್ತೇವೆ. ಯಾವ ರೀತಿಯ ತನಿಖೆ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದು ಬಿಜೆಪಿ ನಾಯಕರಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆಯ ಸಂದೇಶ ರವಾನಿಸಿದರು.

ಕುಮಾರಸ್ವಾಮಿಗೆ ಪಾಪ ಕೆಲಸ ಇಲ್ಲ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗ ಪ್ರತಿಕ್ರಿಯಿಸಿರುವ ಅವರು, ಕುಮಾರಸ್ವಾಮಿಗೆ ಪಾಪ ಕೆಲಸ ಇಲ್ಲ. ಇನ್ನೇನು ಮಾಡ್ತಾರೆ. ನಾವು ಮಾಡಿರುವ ಒಳ್ಳೆಯದನ್ನಂತೂ ಹೇಳೋಕೆ ಆಗಲ್ಲ. ಅದಕ್ಕೆ ಈ ರೀತಿ ಏನಾದರೂ ಒಂದು ಆರೋಪ ಮಾಡ್ತಾ ಇರ್ತಾರೆ ಎಂದು ತಿರುಗೇಟು ಕೊಟ್ಟರು.

RELATED ARTICLES

Related Articles

TRENDING ARTICLES