ಬೆಂಗಳೂರ :- ನೈತಿಕತೆ ಇಲ್ಲದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತು ತಪ್ಪಿ ಜನರಿಗೆ ಮೋಸ ಮಾಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಗ್ಯಾರಂಟಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೆದರು ಆಕ್ರೋಶ ಹೊರಹಾಕಿದ ಅವರು, ತಲಾ ಹತ್ತು ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಹಣ ಕೊಡುತ್ತಿದ್ದಾರೆ ಹಣವನ್ನು ತಿನ್ನೋಕೆ ಆಗಲ್ಲ ಈಗ ಅಕ್ಕಿ ಕೊಡಿ ಎಂದು ಒತ್ತಾಯ ಮಾಡಿದರು. ಈ ವಿಚಾರವಾಗಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿ ಅಕ್ಕಿ ಅಭಿಯಾನವನ್ನೂ ಸಹ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೆಂಡಕಾರಿದರು.
ಇದನ್ನೂ ಓದಿ : ಸೋಲಿನ ನೈತಿಕ ಹೊಣೆ ಹೊತ್ತು ಕಟೀಲ್ ರಾಜೀನಾಮೆ ನೀಡಲಿ : ಎಂ.ಪಿ ರೇಣುಕಾಚಾರ್ಯ
ಇನ್ನೂ ಅಕ್ಕಿಯ ಬದಲು ಹಣ ನೀಡುವ ಸರ್ಕಾರದ ನಿರ್ಣಯವನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರ,ಜನರಿಗೆ ಅಕ್ಕಿ ಕೊಡದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ್ದಾರೆ.
ಚುನಾವಣೆ ಪೂರ್ವದಲ್ಲಿ 10 ಕೆ.ಜಿ. ಅಕ್ಕಿ ಕೊಡುವ ವಾಗ್ದಾನ ನೀಡಿ ಜೊತೆಗೆ ಕೇಂದ್ರದ 5 ಕೆ.ಜಿ. ಸೇರಿ ಒಟ್ಟು 15 ಕೆ.ಜಿ. ಅಕ್ಕಿ ಕೊಡಬೇಕಿತ್ತು ಆದರೆ ಈಗ ಹಣ ಹಾಕಲು ಹೊರಟಿದ್ದಾರೆ ಆ ಹಣವನ್ನು ತಿನ್ನೋಕಾಗುತ್ತಾ? ಶಕ್ತಿ ಇದ್ರೆ 10 ಕೆ.ಜಿ.ಅಕ್ಕಿ ಕೊಡಬೇಕೆಂದ ಕಟೀಲ್ ಹಣ ಹಾಕುವ ಢೋಂಗಿ ರಾಜಕಾರಣ ಸರಿಯಲ್ಲ ಎಂದು ಇದನ್ನು ನಾವು ಖಂಡಿಸುತ್ತೇವೆ ಎಂದು ರಾಜ್ಯ ಸರ್ಕಾರವನ್ನು ತಿವಿದರು. ನುಡಿದಂತೆ ನಡೆಯದಿದ್ದರೆ ಕಾಂಗ್ರೆಸ್ ಸರ್ಕಾರ ಸದನದ ಒಳಗೂ ಹೊರಗೂ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.