Friday, December 20, 2024

ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಾನೂನು ಕ್ರಮ : ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸೋರಿಗೆ ಕಡಿವಾಣ ಹಾಕ್ತೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಜಾಲತಾಣಗಳಲ್ಲಿ ಫೇಕ್ ನ್ಯೂಸ್ ಹೆಚ್ಚಾಗುತ್ತಿದ್ದು, ಕೆಲವುರು ಬೇಕಂತಲೇ ಪೇಕ್​ ನ್ಸೂಸ್​ ಹಬ್ಬಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದ್ರೆ ಶಿಸ್ತು ಕ್ರಮ ಕೈಗೊಳ್ಳುತ್ತಾದೆ ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಗೆ ನೀಡಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಚರಣೆಯ ಕೀರ್ತಿ ಕಾಂಗ್ರೆಸ್ಸಿಗೆ ಸಲ್ಲುತ್ತದೆ : ಸಚಿವ ಚಲುವರಾಯ ಸ್ವಾಮಿ

ಸುಳ್ಳು ಸುದ್ದಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿರುವವರು ಸೋಶೀಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಾಗೂ ಸ್ಟೋರಿಗಳನ್ನು ರೂಪಿಸಿ ಅದನ್ನು ಹರಿಬಿಡುತ್ತಾರೆ. ಇದು ಶಾಂತಿ ಕದಡುವ ಹಾಗೂ ಬೇರೆ ಬೇರೆ ಸಮುದಾಯಗಳ‌(Community) ಕೋಪಕ್ಕೆ ಕಾರಣವಾಗುತ್ತಿದೆ. ಇದನ್ನು ಯಾರು ಮಾಡುತ್ತಾರೆ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಹಾಗೂ ಸಮಾಜದ ಶಾಂತಿ ಕದಡುವ ವಿಚಾರದಲ್ಲಿ ಕೆಲವರು ಅಹಿತಕರವಾದ ಸುದ್ದಿಯನ್ನು ಹರಡುತ್ತಿದ್ದಾರೆ ಇದರಿಂದ ಸಮಾಜದ ಸಭ್ಯತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಾದೆ. ಇಂತಹ ಘಟನೆಗಳನ್ನು ಮಾಡುವವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತಾವೆ ಎಂದು ಹೇಳಿದ್ದಾರೆ.

ಕಮ್ಯೂನಲ್ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ ಈ ಹಿಂದೆ ಗಲಭೆಗಳು ನಡೆದಿರುವುದು ನಮಗೆಲ್ಲಾ ತಿಳಿದಿದೆ. ಈ ಕುರಿತು ಗೂಗಲ್ ಹಾಗೂ ಫೇಸ್​​ಬುಕ್​ನ ನ್ಯಾಷನಲ್ ಹೆಡ್​​ಗಳನ್ನು ಭೇಟಿ ಮಾಡಿ ಸಹಕರಿಸುವಂತೆ ಮನವಿ ಮಾಡುತ್ತೇನೆ. ಅಂತಹ ಚಟುವಟಿಕೆಗಳ ಮೇಲೆ‌ ನಿಯಂತ್ರಣ ಹೇರಲು ಕ್ರಮ ತಗೆದುಕೊಳ್ಳಲು ಮುಂದಾಗಿದ್ದೇವೆ ಎಂದರು.

 

 

RELATED ARTICLES

Related Articles

TRENDING ARTICLES