Saturday, November 2, 2024

ಬಿಜೆಪಿಯವ್ರು ಕೆಸರಿನಲ್ಲಿ ಬಿದ್ದು ಮೌಲ್ಯ ಕಳೆದುಕೊಂಡ್ರು : ಬಾಂಬೆ ಬಾಯ್ಸ್ ವಿರುದ್ದ ಬಿ ನಾಗೇಂದ್ರ ಕಿಡಿ

ಬಳ್ಳಾರಿ: ವಲಸಿಗ ಶಾಸಕರು ನಮ್ಮ ಪಕ್ಷದಲ್ಲಿದ್ದಾಗ ವಜ್ರದಂತೆ ಇದ್ದರು, ಅದರೆ ಅವರು ಈಗ ಬಿಜೆಪಿಗೆ ಹೋದ ಮೇಲೆ ಮೌಲ್ಯ ಕಳೆದುಕೊಂಡು ಕೆಸರಿನಲ್ಲಿ ಬಿದ್ದು ಕಲ್ಲಿನಂತಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಕಿಡಿಕಾರಿದ್ದಾರೆ.

ಆಪರೇಷನ್ ಕಮಲದಿಂದಲೆ ಬಿಜೆಪಿ ಸೋಲನ್ನು ಕಾಣಬೇಕಾಯಿತೆಂಬ ಮಾಜಿ ಸಚಿವ ಈಶ್ವರಪ್ಪನವರ ಹೇಳಿಕೆಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕೆ.ಎಸ್. ಈಶ್ವರಪ್ಪನವರು ಅವರ ಪಕ್ಷದ ಆಂತರಿಕ ವಿಚಾರವನ್ನು ಹಾಗೂ ಅವರ ಪಕ್ಷದೊಳಗೆ ಏನು ನಡೆಯುತ್ತದೆ ಎನ್ನುವುದನ್ನು ಸರಿಯಾಗಿಯೇ ಹೊರಗೆಡವಿದ್ದಾರೆ.

ವಲಸಿಗ ಶಾಸಕರು ಬಿಜೆಪಿಗೆ ಹೋದ ನಂತರ ವಜ್ರದಂತಹ ಮೌಲ್ಯವನ್ನ ಕಳೆದುಕೊಂಡಿದ್ದಾರೆ, ನಮ್ಮ ಪಕ್ಷದ ಸಿದ್ದಾಂತಗಳನ್ನ ಮೆಚ್ಚಿಕೊಂಡು ಅದರ ತತ್ವ ಸಿದ್ದಾಂತಗಳನ್ನ ಒಪ್ಪಿಕೊಂಡು ಪಕ್ಷಕ್ಕೆ ಮರಳಿ ಬಂದರೆ ರಾಜ್ಯ ಹಾಗೂ ಕೇಂದ್ರ ನಾಯಕರು ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೋ ಬೇಡವೇ ಎಂಬುವುದನ್ನು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕಳಪೆ ಕಾಮಗಾರಿಗೆ ಕಿತ್ತುಬಿದ್ದ ಅಂಗನವಾಡಿ ಮೇಲ್ಛಾವಣಿ

ಕಾಂಗ್ರೆಸ್​ ಸರ್ಕಾರ ಈಗಲೇ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನ ಈಡೇರಿಸುತ್ತಿದ್ದು, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28ಕ್ಕೆ 28 ಕ್ಷೇತ್ರಗಳನ್ನು ಗೆಲುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ದೆ ಮಾಡಬೇಕು ಅನ್ನೋದನ್ನ ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನ ಸಹೋದರ ವೆಂಕಟೇಶ ಪ್ರಸಾದ್ ಸ್ಪರ್ಧೆ ಮಾಡಲ್ಲ ಅವರು ಟಿಕೆಟ್ ಆಕ್ಷಾಂಕಿಯಲ್ಲ ನಮ್ಮ ಕುಟುಂಬದಿಂದ ಮತ್ತೆ ಯಾರು ಸ್ಪರ್ಧೆ ಮಾಡಲ್ಲ ಎನ್ನುವ ಮೂಲಕ ಕುಟುಂಬ ರಾಜಕಾರಣವನ್ನು ಅಲ್ಲಗಳೆದರು.

RELATED ARTICLES

Related Articles

TRENDING ARTICLES