ಬೆಂಗಳೂರ: ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ.
ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ವಿಪಕ್ಷವಾಗಿರುವ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಿದ್ದತೆ ನಡೆಸಿದ್ದು ಬಹುಕೋಟಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಆದೇಶ ನೀಡುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ.
ಪ್ರಮುಖವಾಗಿ ಈ ಬಹುಕೋಟಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರು ಸೇರಿದಂತೆ ಅವರ ಪುತ್ರರ ಹೆಸರುಗಳಿರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಬಿಜಿಪಿ ನಾಯಕರನ್ನು ಸಿಲುಕಿಸಲು ಆಡಳಿತ ಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ.
ಈ ಕುರಿತು ವಿಶೇಷ ತನಿಖಾ ತಂಡ ರಚಿಸುವ ಬಗ್ಗೆಯೂ ಸರ್ಕಾರದಿಂದ ಆದೇಶ ಹೊರಬೀಳುವ ಲಕ್ಷಣಗಳು ದಟ್ಟವಾಗಿವೆ. ಅಲ್ಲದೆ ಈ ಪ್ರಕರಣದ ಸಂಪೂರ್ಣ ತನಿಖೆಗೆ ಬೆಂಗಳೂರು ನಗರ ಪೋಲಿಸ್ ಆಯುಕ್ತರಾದ ಬಿ.ದಯಾನಂದ ಅವರು ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ.
ಅಲ್ಲದೆ ನಾಳಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿರುವ 5 ಗ್ಯಾರಂಟಿ ಭರವಸೆಗಳ ಕುರಿತು ಸಂಪುಟ ಸಭೆಯಲ್ಲ ಗಂಭೀರ ಚರ್ಚೆಯು ನಡೆಯಲಿದೆ. ಇನ್ನೂ ಜುಲೈ 1 ರಿಂದ ಜನರಿಗೆ 10 ಕೆ.ಜಿ. ನೀಡುತ್ತೇವೆ ಎಂದು ಹೇಳಿದ್ದ ಸರ್ಕಾರವು ಅಕ್ಕಿ ಹಂಚಿಕೆ ಮಾಡಬೇಕೋ ಅಥವಾ ಸಂಪೂರ್ಣವಾಗಿ ಅಕ್ಕಿಯನ್ನು ದಾಸ್ತಾನು ಮಾಡಿದ ಬಳಿಕ ಹಂಚಬೇಕೋ ಎನ್ನುವ ಕುರಿತು ಚರ್ಚಿಯಾಗಲಿದೆ.
5 ಗ್ಯಾರಂಟಿಗಳ ಸುದೀರ್ಘವಾದ ಚರ್ಚೆಯ ಜೊತೆ್ಗೆ ಬಜೆಟ್ ಅಧಿವೇಶನದ ದಿನಾಂಕವನ್ನು ಸಚಿವ ಸಂಪುಟ ಸಭೆ ಹೊರಹಾಲಿದೆ.