ಬೆಂಗಳೂರು: ದಿನದಿಂದ ದಿನಕ್ಕೆ ಬೆಲೆ ಏರಿಕೆ ಕಾವು ಗ್ರಾಹಕರನ್ನು ಕಾಡ್ತಿದೆ. ಹೌದು, ಮುಂಗಾರು ಮಳೆಯಿಂದಗೆ ತರಕಾರಿಗಳ ಬೆಲೆ ಏರಿಗೆ ಆಗಿದೆ.ಇಂದು ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ (Tomato Price) ನೂರರ ಗಡಿ ತಲುಪಿದೆ.
ಹೌದು, ಟೊಮ್ಯಾಟೋ ಬೆಲೆ ನೂರು ರೂಪಾಯಿಯ ಒಳ್ಳೆಯ ಗುಣಮಟ್ಟದ ಅಂದ್ರೆ ಮೊದಲ ದರ್ಜೆಯ ಟೊಮ್ಯಾಟೋ ಬೆಲೆ ನೂರು ರೂಪಾಯಿ ಆಗಿದೆ. ಎರಡನೇ ದರ್ಜೆಯ ಟೊಮ್ಯಾಟೋ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ.
ಟೊಮ್ಯಾಟೋ ಜೊತೆಗೆ ತರಕಾರಿ ಬೆಲೆ ಕೂಡ ಏರಿಕೆ
ಟೊಮ್ಯಾಟೋ ಜೊತೆಗೆ ಇತರೆ ತರಕಾರಿ ಬೆಲೆಯೂ (Vegetable Price) ಏರಿಕೆ ಕಂಡಿದೆ. 15 KG ಟೊಮ್ಯಾಟೋ ಬಾಕ್ಸ್ ಸಾವಿರ ಸನಿಹಕ್ಕೆ ಬಂದಿದೆ. ಕೋಲಾರದ ಟೊಮ್ಯಾಟೋ ರಫ್ತು (Tomato Export) ಆಗುತ್ತಿರುವ ಹಿನ್ನೆಲೆ ಬೆಲೆ ಏರಿಕೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ರಾಜಧಾನಿಯಲ್ಲಿಯೂ ಟೊಮ್ಯಾಟೋ ಬೆಲೆ ನೂರರ ಗಡಿ ತಲುಪಿದೆ.
ಟೊಮ್ಯಾಟೋ ಖರೀದಿಗೆ ಮಹಿಳೆಯರು ಹಿಂದೇಟು
ಕೆ ಆರ್ ಮಾರ್ಕೆಟ್ ಸೇರಿದಂತೆ ಮಲ್ಲೇಶ್ವರಂ, ಜಯನಗರ, ರಾಜಾಜಿನಗರ ಇತರೆಡೆಚ ಟೊಮ್ಯಾಟೋ 90-100 ರೂ. ದರದಲ್ಲಿ ಮಾರಾಟವಾಗುತ್ತಿದೆ. ಟೊಮಾಟೋ ಖರೀದಿ ಮಾಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.