ಬಾಗಲಕೋಟೆ : ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.
ಬಾಗಲಕೋಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಪಾಕಿಸ್ತಾನ ಪರವಾದ ಸರ್ಕಾರ ಬಂದಿದೆ. ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ. ಭಾರತ್ ಜೋಡೋ ಮಾಡಿದ್ದು ತೋಡೋ ಆಗಿದೆ. ಅವರ ಮುತ್ಯಾನು ಹಾಗೆ ಮಾಡಿದ. ಜೋಕರ್ ಅಂತ ಹೊಯ್ಯಕೊಳ್ತಾರೆ, ಜೋಕರ್ ಇರದಿದ್ರೆ ನಗೋದು ಹೇಗೆ? ಎಂದು ಕುಟುಕಿದರು.
ಇದನ್ನೂ ಓದಿ : ತುಡಗರು, ಕಳ್ಳರು, ಲಪಂಗರು, ಬದ್ಮಾಶರು ಪಾಟ್ನಾದಲ್ಲಿ ಮೊನ್ನೆ ಕೂಡಿದ್ರು : ಶಾಸಕ ಯತ್ನಾಳ್ ಟಕ್ಕರ್
ರಾಜ್ಯದಲ್ಲಿ ಹೊಸ ಯುಗ ಶುರುವಾಗುತ್ತೆ
ಯಾರು ಏನು ಬೇಕಾದ್ರೂ ಮಾಡಲಿ. ಸೋತವರು ಯಾರೂ ಎದೆಗುಂದಬೇಡಿ. ನಾನು ಸೋತಿದ್ದೇನೆ. ಈಗ ಎಲ್ಲರೂ ಒಗ್ಗಟ್ಟಾಗಿ ಗೆಲುವಿಗೆ ಹೋರಾಡೋಣ. ಕರ್ನಾಟಕದಲ್ಲಿ ಹೊಸ ಯುಗ ಶುರುವಾಗುತ್ತೆ ಎಂದು ಶಾಸಕ ಯತ್ನಾಳ್ ಕಾರ್ಯಕರ್ತರಿಗೆ ಕರೆ ಕೊಟ್ಟರು.
ಸಿಎಂ ಭಾಷೆಯೂ ಹೊಲಸಲ್ಲವೇ?
ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ. ಯತ್ನಾಳ್, ಬಾಯಿ ತೆರೆದರೆ ಹೊಲಸು ಮಾತುಗಳು ಎಂದಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ಉತ್ತರ ಕರ್ನಾಟಕದ ಆಡುಭಾಷೆ ನಿಮಗೆ ‘ಹೊಲಸು’ ಎಂದರೆ ನಿಮ್ಮ ಸಿದ್ದರಾಮಯ್ಯನವರು ಮಾತನಾಡುವ ಆಡುಭಾಷೆಯೂ ಹೊಲಸಲ್ಲವೇ? ನಿಮಗೆ ಅರ್ಥ ಆಗುವ ಭಾಷೆಯಲ್ಲೇ ಮಾತನಾಡುವ ಅಭ್ಯಾಸ ನನ್ನದು ಎಂದು ಛೇಡಿಸಿದ್ದಾರೆ.