Sunday, December 22, 2024

ಹಿಂದು ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು : ಶಾಸಕ ಯತ್ನಾಳ್

ಬಾಗಲಕೋಟೆ : ಹಿಂದು ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.

ಬಾಗಲಕೋಟೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿವಾಜಿ ಮೂರ್ತಿಗೆ ಕೆಲವರು ವಿರೋಧ ಮಾಡ್ತಾರೆ ಅಂದ್ರೆ, ಇವರು ಯಾರಿಗೆ ಹುಟ್ಟಿದ್ದಾರೆ. ಬಾಗಲಕೋಟೆ ರಾಜಕಾರಣ ಹದಗೆಟ್ಟ ಹೈದ್ರಾಬಾದ್ ಆಗಿದೆ. ಇದನ್ನು ಶುದ್ಧ ಮಾಡಬೇಕಿದೆ. ನಮ್ಮ ಪಾರ್ಟಿಯಲ್ಲಿದ್ದು ನಮ್ಮವರನ್ನ ಸೋಲಿಸೋದು ಆಗಬಾರದು. ಪಕ್ಷದಲ್ಲಿದ್ದು ತಾಯಗಂಡ ಕೆಲಸ ಮಾಡಬಾರದು. ದೇಶಕ್ಕಾಗಿ ಬಿಜೆಪಿಗೆ ಮತ ಹಾಕಬೇಕು ಎಂದು ಹೇಳಿದರು.

ಅವನೊಬ್ಬ ಹ್ಯಾಕ್ ಮಂತ್ರಿ

ರಾಜ್ಯದಲ್ಲಿ ನಮ್ಮ ಕೆಲವು ನಾಯಕರು ಮಾಡಿದ್ದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಇಂದಿನ ಕಾಂಗ್ರೆಸ್ ಸರ್ಕಾರ ನೀಚ ಸರ್ಕಾರ. ಒಬ್ಬ ಸಚಿವ ಆಪ್ ಹ್ಯಾಕ್ ಆಗಿದೆ ಅಂತಾನೆ. ಅವನೊಬ್ಬ ಹ್ಯಾಕ್ ಮಂತ್ರಿ. ಇದು ದೇಶದ್ರೋಹದ ಹೇಳಿಕೆ ಎಂದು ಕೇಂದ್ರ ಸರ್ಕಾರ ನಮ್ಮ ಆಪ್ ಹಾಗೂ ಸರ್ವರ್ ಹ್ಯಾಕ್ ಮಾಡಿದೆ ಎಂದಿದ್ದ ಸತೀಶ್ ಜಾರಕಿಹೊಳಿಗೆ ಯತ್ನಾಳ ಟಕ್ಕರ್ ಕೊಟ್ಟರು.

ಇದನ್ನೂ ಓದಿ : ಪ್ರಧಾನಿ ಮೋದಿಗೆ ‘ಆರ್ಡರ್ ಆಫ್ ದಿ ನೈಲ್’ ಗೌರವ

20 ವರ್ಷ ನಾನು ಇರೋದೆ

ನನ್ನನ್ನು ಸೋಲಿಸಲು ಎಷ್ಟೋ ಜನ ಮುಂದಾದ್ರು. ಗೌಡನ್ನ ಸೋಲಸ್ತೀವಿ ಅಂದವರು ಏನಾದ್ರೂ ನಿಮಗೆ ಗೊತ್ತಾಗಿದೆ. ತಪ್ಪುಗಳು ಆಗೋದು ಸಹಜ. ನಾನು ಸಹ ಸೋತಿದ್ದೇನೆ. ಇನ್ನುಮುಂದೆ ಡಂ, ಡುಂ ಅನ್ನೋ ಹಾಗಿಲ್ಲ, 20 ವರ್ಷ ನಾನು ಇರೋದೆ. ರೊಕ್ಕಾ ಕೊಟ್ಟು ಕೆಲವರು ಹಲಕಟಗಿರಿ ಮಾಡ್ಯಾರ, ಏನು ಮಾಡೋದು ಎಂದು ಕಿಡಿಕಾರಿದರು.

ಗುಂಡಾಗಿರಿ ಮಾಡೋಕೆ ಬಂದಿಲ್ಲ

ಬಿಜೆಪಿ ಪಕ್ಷದಲ್ಲಿರುವಂತಹ ದೇವರ ಕಾರ್ಯಕರ್ತರು ಎಲ್ಲಿಯೂ ಸಿಗೋದಿಲ್ಲ. ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅನಂತಕುಮಾರ್ ಜೊತೆ ಬೆಳೆದವನು. ೪ನೇ ಲೀಡರ್. ಯಡಿಯೂರಪ್ಪನವರು ನಮ್ಮನ್ನ ಮಂತ್ರಿ ಮಾಡಲಿಲ್ಲ. ಬೊಮ್ಮಾಯಿ ಮಾಡ್ತಿದ್ರು, ಪರ್ಮಿಷನ್ ಸಿಗಲಿಲ್ಲ. ನಾವೇನು ಇಲ್ಲಿ ಗುಂಡಾಗಿರಿ ಮಾಡೋಕೆ ಬಂದಿಲ್ಲ ಎಂದು ಘರ್ಜಿಸಿದರು.

RELATED ARTICLES

Related Articles

TRENDING ARTICLES