ಬೆಳಗಾವಿ : ರಾಜ್ಯದಲ್ಲಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆ ಗೊಂದಲ ವಿಚಾರವಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾರೂ ಸಿಗ್ತಾ ಇಲ್ಲ ಅಂತ ಏನೂ ಇಲ್ಲ. ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಬಹಳ ಒಳ್ಳೆಯ ರೀತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರನ್ನೂ ಘೋಷಣೆ ಮಾಡ್ತಾರೆ ಎಂದು ಹೇಳಿದ್ದಾರೆ.
ಸಮರ್ಥ ನಾಯಕ ಸಂಘಟನಾ ಕೌಶಲ್ಯ ಇರುವ ನಾಯಕರು ನಮ್ಮ ಪಕ್ಷದಲ್ಲಿ ಇದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಒಂದು ಹೆಸರು ಘೋಷಣೆ ಮಾಡ್ತಾರೆ. ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರನ್ನೂ ಘೋಷಣೆ ಮಾಡ್ತಾರೆ. ಇಬ್ಬರೂ ಕೂಡ ಪಕ್ಷದ ಸಂಘಟನೆಯಲ್ಲಿ ತೊಡಗುತ್ತಾರೆ. ಅವರ ನೇತೃತ್ವದಲ್ಲಿ ನಾವು ನಡೆಯುತ್ತೇವೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ಪ್ರಕ್ರಿಯೆ ನಡೆದಿದೆ : ನಳಿನ್ ಕುಮಾರ್ ಕಟೀಲ್
ಆಂತರಿಕ ಕಚ್ಚಾಟದಿಂದ ಸೋಲು?
ಬಿಜೆಪಿ ಪಕ್ಷದ ಆಂತರಿಕ ಕಚ್ಚಾಟದಿಂದ ಬಿಜೆಪಿಗೆ ಸೋಲು ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆ ತರ ಏನೂ ಇಲ್ಲ. ಕಚ್ಚಾಟ ಅನ್ನೊದಕ್ಕಿಂತ ಕೆಲವೊಂದು ಕಾರಣ ಇರಬಹುದು. ಬೇರೆ ಬೇರೆ ಕಾರಣ ಕೂಡ ಇತ್ತು ಎಂದು ಹೇಳಿದ್ದಾರೆ.
ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ
ಗ್ಯಾರಂಟಿ ಯೋಜನೆ ಜಾರಿಗೆ ವಿಳಂಬ ಕುರಿತು ಮಾತನಾಡಿ, ರಾಜ್ಯದ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆ ನಂಬಿಕೊಂಡು ಕುಳಿತರಬಹುದು. ಇವತ್ತಿನ ಪರಿಸ್ಥಿತಿಯಲ್ಲಿ ಅದು ಜಾರಿ ಆಗುವುದು ಕಷ್ಟ. ಗ್ಯಾರಂಟಿಗೆ ಬರುವ ಸಮಸ್ಯೆ ನೋಡಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆ ಸಿಗುತ್ತದೆ ಇಲ್ಲೊ ಅನ್ನೊದು ನಾನು ಮಾತನಾಡೋದಕ್ಕಿಂತ ಸುಮ್ಮನೆ ಕುಳಿತು ನೋಡುವ ಕೆಲಸ ಮಾಡ್ತಿನಿ. ವೇಟ್ ಆ್ಯಂಡ್ ವಾಚ್ ಮಾಡಿ ಆಮೇಲೆ ಮಾತನಾಡುತ್ತೇನೆ ಎಂದು ಕುಟುಕಿದ್ದಾರೆ.