Sunday, January 19, 2025

ಪ್ರಧಾನಿ ಮೋದಿಯವರದ್ದು ಐರನ್ ಲೆಗ್ : ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿಯವರದ್ದು ಐರನ್ ಲೆಗ್ ಎಂದು ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ.

ಕೊಪ್ಪಳದ ಕಾರಟಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೋದಿಯವರು ಎಲ್ಲಿಲ್ಲೆ ಭಾಷಣ ಮಾಡಿ ಹೋಗಿದ್ದಾರೋ ಅಲ್ಲಿ ಕಾಂಗ್ರೆಸ್ ಗೆದ್ದಿದೆ. ಮೋದಿಯವರದ್ದು ಐರನ್ ಲೆಗ್ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಗೆ ಮಾತ್ರವಲ್ಲ, ಇಡೀ ಬಿಜೆಪಿಗೆ ಲೋಕಸಭಾ ಚುನಾವಣೆಯ ಭಯ ಇದೆ. ಮೋದಿಯವರ ಸುಳ್ಳನ್ನು ಎಷ್ಟು ದಿನ ರಾಜ್ಯದ ಹಾಗೂ ದೇಶದ ಜನ ಕೆಳೋಕೆ ಸಾಧ್ಯ. ಮೋದಿಯವರ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಮೋದಿ ಒಂಬತ್ತು ವರ್ಷ ಸುಳ್ಳನ್ನೇ ಹೇಳಿಕೊಂಡು ಆಡಳಿತ ನಡೆಸಿದ್ದಾರೆ ಎಂದು ಕುಟುಕಿದ್ದಾರೆ.

ಬಿಜೆಪಿಗೆ ಧಮ್ಮು, ತಾಕತ್ತು ಇದ್ರೆ, ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ರೂಪಾಯಿ ಹಾಕಲಿ. ಕಪ್ಪು ಹಣ ತರ್ತೀನಿ ಅಂದ್ರು ತಂದ್ರಾ? ರೈತರ ಆದಾಯ ದ್ವಿಗುಣ ಆಗುತ್ತೆ ಅಂದ್ರು ಆಯ್ತಾ? ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು ಕೊಟ್ರಾ? ದೇಶದಲ್ಲಿ ಉದ್ಯೋಗ ಸಮಸ್ಯೆ ತಾಂಡವಾಡ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯನವರೇ ನೀವು ಪಂಚೆ ಕಳಚಿಕೊಂಡು ಓಡಬೇಕಾಗುತ್ತದೆ : ಗೋವಿಂದ ಕಾರಜೋಳ

ಮತ್ತೆ ಪ್ರಧಾನಿ ಆಗೋದು ನಿಶ್ಚಿತ

ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ, ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ನರೇಂದ್ರ ಮೋದಿ ಇಳಿಸುವ ವಿಪಕ್ಷಗಳ ಪ್ರಯತ್ನ ಅಕ್ಷಮ್ಯ ಅಪರಾಧ. ಹೀಗಾಗಿ. ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲೇಬೇಕು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಸಾಧನೆ ಮಾತಾಡಬೇಕು, ಮಾತಾಡೋದೆ ಸಾಧನೆ ಆಗಬಾರದು. 28ಕ್ಕೆ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿಗೆ ನಾವೆಲ್ಲರೂ ಕೊಡುಗೆ ಕೊಡಬೇಕು ಎಂದಿದ್ದಾರೆ.

RELATED ARTICLES

Related Articles

TRENDING ARTICLES