Wednesday, January 22, 2025

Actor Suraj: ಪಾರ್ವತಮ್ಮ ರಾಜ್​ಕುಮಾರ್​ ತಮ್ಮನ ಮಗನಿಗೆ ಅಪಘಾತ: ಕಾಲು ಕಳೆದುಕೊಂಡ ಯುವ ನಟ ಸೂರಜ್​

ಬೆಂಗಳೂರು: ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರನಾದ ಸೂರಜ್​ (Kannada Actor Suraj) ಅವರು ಗಭೀರಕ್ಕೆ ಆಘಾತ ಒಳಗಾಗಿದ್ದಾರೆ.ಇಂದು ಡಾ.ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ನಡೆದಿದೆ.

ನಂಜನಗೂಡಿನ ಬಳಿ ಲಾರಿ ಡಿಕ್ಕಿ ಆಗಿದೆ.ಶನಿವಾರ (ಜೂನ್​ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (Suraj Accident) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಪತಿರಾಯ

ಗಾಂಧಿನಗರಕ್ಕೆ ಎಂಟ್ರಿ ನೀಡಬೇಕು ಎಂದು ಸೂರಜ್​ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ‘ಭಗವಾನ್​ ಶ್ರೀಕೃಷ್ಣ ಪರಮಾತ್ಮ’ ಸೇರಿದಂತೆ ಒಂದೆರಡು ಸಿನಿಮಾಗಳನ್ನು ಅವರು ಅನೌನ್ಸ್​ ಮಾಡಿದ್ದರು. ಅಷ್ಟರಲ್ಲಾಗಲೇ ಅವರಿಗೆ ಈ ದುಸ್ಥಿತಿ ಎದುರಾಗಿದೆ.

ಘಟನೆ ನಡೆದಿದ್ದು ಹೇಗೆ..?

ಸೂರಜ್​ ಅವರು ಬೈಕ್​ನಲ್ಲಿ ಊಟಿಗೆ ತೆರಳುತ್ತಿದ್ದರು. ಈ ವೇಳೆ ಅವರ ಕಾಲಿನ ಮೇಲೆ ಟಿಪ್ಪರ್​ ಹರಿದಿದೆ. ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಕತ್ತರಿಸುವುದು ಅನಿವಾರ್ಯ ಆಯಿತು.

ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂದು ಸೂರಜ್​ ಕನಸು ಕಂಡಿದ್ದರು. ಕೆಲವು ಚಿತ್ರಗಳ ಶೂಟಿಂಗ್​ನಲ್ಲೂ ಪಾಲ್ಗೊಂಡಿದ್ದರು. ಆದರೆ ಈಗ ಅವರು ಕಾಲು ಕಳೆದುಕೊಂಡು ಸಂಕಟಪಡುವಂತಾಗಿರುವುದು ನೋವಿನ ಸಂಗತಿ.

 

RELATED ARTICLES

Related Articles

TRENDING ARTICLES