Wednesday, January 22, 2025

ಪ್ರಧಾನಿ ಮೋದಿಗೆ ‘ಆರ್ಡರ್ ಆಫ್ ದಿ ನೈಲ್’ ಗೌರವ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ಬಳಿಕ ಇದೀಗ ಎರಡು ದಿನಗಳ ಈಜಿಪ್ಟ್ ಪ್ರವಾಸದಲ್ಲಿದ್ದಾರೆ.

ಈಜಿಪ್ಟ್ ಭೇಟಿಯ ಎರಡನೇ ದಿನದಂದು ಪ್ರಧಾನಿ ಮೋದಿ ಅವರಿಗೆ ರಾಜಧಾನಿ ಕೈರೋದಲ್ಲಿ ಈಜಿಪ್ಟ್‌ನ ಅತ್ಯುನ್ನತ ಪ್ರಶಸ್ತಿ ‘ಆರ್ಡರ್​ ಆಫ್​ ದಿ ನೈಲ್’ ಅನ್ನು ನೀಡಿ ಗೌರವಿಸಲಾಯಿತು.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಪ್ರಧಾನಿ ಮೋದಿಯವರಿಗೆ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಳೆದ 9 ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 13ನೇ ಅತ್ಯುನ್ನತ ರಾಜ್ಯ ಗೌರವ ಇದಾಗಿದೆ.

ಪ್ರಧಾನಿ ಮೋದಿ ಅವರು ಇದಕ್ಕೂ ಮುನ್ನ ಕೈರೋದಲ್ಲಿರುವ ದೇಶದ 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು. ಇದನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾಗಿದೆ.

ಯುದ್ಧದ ಸ್ಮಶಾನಕ್ಕೆ ಮೋದಿ ಭೇಟಿ

ಬಳಿಕ, ಪ್ರಧಾನಿ ಮೋದಿ ಅವರು ಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧದ ಸ್ಮಶಾನಕ್ಕೆ ಭೇಟಿ ನೀಡಿದರು. ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು.

ಈ ಸ್ಮಾರಕವನ್ನು ಮೊದಲ ವಿಶ್ವ ಸಮರದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರ ಸ್ಮರಣಾರ್ಥ ನಿರ್ಮಿಸಲಾಗಿದೆ.

RELATED ARTICLES

Related Articles

TRENDING ARTICLES