Friday, November 22, 2024

ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ದೂರ ಇಡಿ : ಶಾಸಕ ಮುನಿರಾಜು

ಬೆಂಗಳೂರು : ಬೆನ್ನಿಗೆ ಚೂರಿ‌ ಹಾಕಿದವರನ್ನ ಪಕ್ಷದಿಂದ ದೂರ‌ ಇಡೋಣ ಎಂದು ದಾಸರಹಳ್ಳಿ ಶಾಸಕ ಮುನಿರಾಜು ಹೇಳಿದ್ದಾರೆ.

ಬೆಂಗಳೂರು ಉತ್ತರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ಸಾಮಾನ್ಯ ಕಾರ್ಯಕರ್ತರಿಗೆ‌ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಎಂದು ತಿಳಿಸಿದ್ದಾರೆ.

ಈ ಮಧ್ಯೆ ನೆರೆದಿದ್ದ‌ ಕಾರ್ಯಕರ್ತರು ಎದ್ದು ಆಕ್ರೋಶ ಹೊರಹಾಕಿದ್ದಾರೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ ಎಂದು ಕೂಗಿದ್ದಾರೆ. ಕಾರ್ಯಕರ್ತರು ತಪ್ಪು ಮಾಡಿದಾಗ ಕಾರ್ಯಕರ್ತರಿಗೆ ಬುದ್ದಿ ಹೇಳ್ತೀರಾ. ಅದೇ ನಾಯಕರು ತಪ್ಪು‌ಮಾಡಿದಾಗ ಯಾಕೆ ಬುದ್ದಿ ಹೇಳಲ್ಲ? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಕಳೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ. ಈ ವೇಳೆ ಶಾಸಕ ಮುನಿರಾಜು ಸಮಾಧಾನ‌ ಪಡಿಸಿದರೂ ಕಾರ್ಯಕರ್ತರು ಬಗ್ಗಲಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವ ಹಂತ ತಲುಪಿತ್ತು.

ಇದನ್ನೂ ಓದಿ : ಬಿಜೆಪಿ ಸೋಲಿಗೆ ಬೇರೆ ಬೇರೆ ಕಾರಣ ಕೂಡ ಇತ್ತು : ಶಶಿಕಲಾ ಜೊಲ್ಲೆ

ಯಡಿಯೂರಪ್ಪ ಮಧ್ಯ ಪ್ರವೇಶ

ಕೊನೆಗೆ‌ ಯಡಿಯೂರಪ್ಪ ಮಧ್ಯ ಪ್ರವೇಶ ಮಾಡಿದ್ದಾರೆ. ಸಮಯ ಕೊಡ್ತೇನೆ, ಸಭೆ ನಂತರ ಬಂದು ನನ್ನ ಜೊತೆ ಚರ್ಚಿಸಿ. ನಿಮ್ಮ ಸಮಸ್ಯೆ ‌ಬಗೆಹರಿಸ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಳಿಕ ಕಾರ್ಯಕರ್ತರು ತಣ್ಣಗಾಗಿದ್ದಾರೆ.

ಕಾಂಗ್ರೆಸ್ ನದ್ದು ಓವರ್ ಲೋಡ್ ಸರ್ಕಾರ. ಯಾವಾಗ ಬೇಕಾದರೂ ಪಕ್ಷ ಹರಿದು ‌ಹಂಚಿ ಹೋಗಬಹುದು. ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ರು. ಉಚಿತ ಗ್ಯಾರಂಟಿ ಯೋಜನೆ ಬಗ್ಗೆ ವ್ಯಾಪಕವಾಗಿ ಪ್ರಚಾರ‌ ಮಾಡಿದ್ರು. ಅದಕ್ಕೆ ಕೌಂಟರ್‌ ಕೊಡುವಲ್ಲಿ ವಿಫಲರಾದೆವು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES