Monday, December 23, 2024

ಅಯ್ಯೋ ಪುಣಾತ್ಮ.. ನಾನು ಸಾವರ್ಕರ್ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ? : ಚಕ್ರವರ್ತಿ ಸೂಲಿಬೆಲೆ

ವಿಜಯಪುರ : ಸಚಿವ ಎಂ.ಬಿ ಪಾಟೀಲ್ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿ ಹಮ್ಮಿಕೊಂಡಿದ್ದ ಗೋ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿರುವ ಅವರು ಎಂ.ಬಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.

ನೀವು ಆಯ್ಕೆ ಮಾಡಿರುವ ಶಾಸಕ ಚಕ್ರವರ್ತಿ ಸೂಲಿಬೆಲೆನಾ ಜೈಲಿಗೆ ಹಾಕ್ತಿನಿ ಅಂತಾರೆ. ಅಯ್ಯೋ ಪುಣಾತ್ಮ, ಶಿವಾಜಿಯ ವಂಶಸ್ಥರು ನಾವು. ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ ವಂಶಸ್ಥ. ನಾನು ಭಗತಸಿಂಗ್ ಹೆಸರು ಹೇಳಿಕೊಂಡು ಬಂದವನು‌. ನನ್ನನ್ನ ಒಳಗಾಗ್ತಿರಾ? ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಚಕ್ರವರ್ತಿ ಸೂಲಿಬೆಲೆ ಬಗ್ಗೆ ನನಗೆ ಗೌರವ ಇದೆ : ಕೆ.ಎಸ್​ ಈಶ್ವರಪ್ಪ

ಕಂಬಿ ಎಣಿಸಬೇಕಾಗುತ್ತದೆ

ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ ನೀಡಿದ್ದರು. ಇದೀಗ ಎಂ.ಬಿ ಪಾಟೀಲ್ ಕ್ಷೇತ್ರದಲ್ಲೇ ಕಾರ್ಯಕ್ರಮ ಮಾಡಿ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ.

ಇದು ಹಿಟ್ಲರ್ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ದಿನ ಬೆಳಗ್ಗೆ ಏನೇನೋ ಮಾತನಾಡುತ್ತಾರೆ. ಆದರೆ, ಈವರೆಗೆ ಒಬ್ಬರನ್ನು ಜೈಲಿಗೆ ಕಳುಹಿಸಿಲ್ಲ. ಯಾವುದೋ ಒಬ್ಬ ಶಿಕ್ಷಕ ಒಂದು ಪೋಸ್ಟ್ ಮಾಡಿದ ತಕ್ಷಣವೇ ಆತನನ್ನು ವಜಾಗೊಳಿಸುತ್ತಾರೆ. ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಕ್ರಮವಹಿಸುತ್ತಾರೆ. ಆದ್ದರಿಂದಲೇ ಇದು ಹಿಟ್ಲರ್ ಸರ್ಕಾರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದರು.

RELATED ARTICLES

Related Articles

TRENDING ARTICLES