Thursday, January 23, 2025

ತುಡಗರು, ಕಳ್ಳರು, ಲಪಂಗರು, ಬದ್ಮಾಶರು ಪಾಟ್ನಾದಲ್ಲಿ ಮೊನ್ನೆ ಕೂಡಿದ್ರು : ಶಾಸಕ ಯತ್ನಾಳ್ ಟಕ್ಕರ್

ಬೆಳಗಾವಿ : ಪಾಟ್ನಾದಲ್ಲಿ ಮೊನ್ನೆ ತುಡಗರು, ಕಳ್ಳರು, ಲಪಂಗರು, ಬದ್ಮಾಶರು ಕೂಡಿದ್ರು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ಈ ವೇಳೆ ವಿಪಕ್ಷ ನಾಯಕರ ಸಭೆ ವಿರುದ್ಧ ಗುಡುಗಿದ್ದಾರೆ.

ರಾಜ್ಯದಲ್ಲಿ ಹಿಂದು ಧ್ವನಿಯನ್ನ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ. ಸಿ.ಟಿ ರವಿಯವರನ್ನ ಸೋಲಿಸಿದ್ರು, ಸಂತೋಷ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ರು. ಪ್ರಧಾನಿಯವರು ರಾಜ್ಯದಲ್ಲಿ ಓಡಾಡಿದ್ದನ್ನ ನೋಡಿ ಬಹಳ ಕೆಟ್ಟದು ಅನಿಸುತ್ತೆ. ದೇಶ ಉಳಿಯಬೇಕು, ಹಿಂದುಗಳು ಸುರಕ್ಷಿತವಾಗಿ ಇರಬೇಕು ಅಂದ್ರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ಮಳೆ ಬರುತ್ತೆ : ಆರ್. ಅಶೋಕ್

ಭಾರತ ಪಾಕಿಸ್ತಾನ ಆಗಬೇಕಾ?

ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಪ್ರಧಾನಿ ಮೋದಿಗೆ ಗೌರವ ಕೊಡಬೇಕಿದೆ. ಪಾಟ್ನಾದಲ್ಲಿ ಮೊನ್ನೆ ತುಡಗರು, ಕಳ್ಳರು, ಲಪಂಗರು, ಬದ್ಮಾಶರು ಕೂಡಿದ್ರು. ಪಾಕಿಸ್ತಾನ ದಿವಾಳಿ ಆದಂತೆ ಭಾರತವನ್ನು ಮಾಡಲು ಹೊರಟಿದ್ದಾರೆ ಅವ್ರು. ಭಾರತ ಪಾಕಿಸ್ತಾನ ಆಗಬೇಕಾ? ಎಂದು ಗುಡುಗಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಐದನೇ ಆರ್ಥಿಕ ರಾಷ್ಟ್ರವಾಗಿದೆ. ನಮ್ಮಲ್ಲಿಯ ಕೆಲವು ಅತೃಪ್ತ ಆತ್ಮಗಳು ಅವರನ್ನ ಕೇಡವುತ್ತೇವಿ ಅಂತ ಓಡಾಡಿದ್ರು. ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದು ನಾನು ಮತ್ತು ಬೊಮ್ಮಾಯಿಯವರು. ಸೋತಿದ್ದೇವೆ ಅಂತ ಮನೆಯಲ್ಲಿ ಕುಳಿತುಕೊಂಡ್ರೇ ಆಗಲ್ಲ. ನಾವೆಲ್ಲರೂ ಕೂಡಿ ಇವತ್ತಿನಿಂದ ಕೆಲಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES