ತುಮಕೂರು : 5 ಕಿಲೋ ಅಕ್ಕಿ ಈಗಾಗಲೇ ಇದ್ಯಲ್ಲ, ತೊಂದರೆ ಏನು ಇಲ್ವಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತುಮಕೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳು ಆಗಲಿಲ್ಲ ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.
ಮುಂದಿನ ತಿಂಗಳು ನೀಡುತ್ತೇವೆ. ತಡ ಆಗಬಹುದು, ಆಗಂತ ತೊಂದರೆ ಏನು ಇಲ್ವಲ್ಲ. 5 ಕಿಲೋ ಈಗಾಗಲೇ ಇದ್ಯಲ್ಲ. ಎಲ್ಲಾ ರಾಜ್ಯದಿಂದ ಹಾಗೂ ಕೇಂದ್ರ ಸ್ವಾಮ್ಯಗಳಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ. ತಡ ಆಗಬಹುದು ಬರುತ್ತೆ ಎಂದು ಹೇಳಿದರು.
ಇದನ್ನೂ ಓದಿ : ‘ಹ್ಯಾಕ್ ಸಚಿವ’ರೇ, 10+5 = 15 ಕೆಜಿ ಅಕ್ಕಿ ಕೊಡಿ : ಶಾಸಕ ಯತ್ನಾಳ್
5+5 = 10 ಕಿಲೋ ಅಕ್ಕಿ ಕೊಡ್ತೀವಿ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಹೊರಗಡೆ ಹೋರಾಟ ಮಾಡಲು ಎಲ್ಲಾರಿಗೂ ಅವಕಾಶ ಇದೆ ಮಾಡಲಿ. ನಮಗೂ ಜವಾಬ್ದಾರಿ ಇದೆ. 10 ಪ್ಲಸ್ 5 ಸೇರಿ 15 ಕಿಲೋ ಅಕ್ಕಿ ಕೊಡಬೇಕು ಎಂಬ ಬಿಜೆಪಿ ಹೇಳಿಕೆಗೆ, ಪ್ರಣಾಳಿಕೆಯಲ್ಲಿ ತೆಗೆದು ನೋಡಲಿ ನಾವು ಚುನಾವಣೆಯಲ್ಲಿ ಹೇಳಿದ್ವಿ. ಕೇಂದ್ರದ 5 ಕಿಲೋ ಸೇರಿಸಿ10 ಕಿಲೋ ಅಕ್ಕಿ ಕೊಡ್ತಿವಿ ಅಂತ. ಅದನ್ನು ಕೊಡ್ತಿವಿ. 5 ಪ್ಲಸ್ 5 ಕೊಡ್ತೀವಿ ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಈಗ ಅಲ್ಲ ಮುಂದಿನ ಅವಧಿಯಲ್ಲಿ. ಸಿದ್ದರಾಮಯ್ಯ ಅವರ ನಂತರ ಎನ್ನುವ ಮೂಲಕ ಸಿಎಂ ಆಸೆಯ ಇಂಗಿತ ಪಡಿಸಿದರು.