Monday, December 23, 2024

ವಿಧಾನಸೌಧದ ದಕ್ಷಿಣ ದ್ವಾರ ಓಪನ್ : ಅದೇ ಬಾಗಿಲಿನಿಂದ ಸಿಎಂ ಎಂಟ್ರಿ ಅಂಡ್ ಎಕ್ಸಿಟ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಢನಂಬಿಕೆಗೆ ಬ್ರೇಕ್ ಹಾಕಿ ವಿಧಾನಸೌಧದಲ್ಲಿ ಕ್ಲೋಸ್ ಆಗಿದ್ದ ಸಿಎಂ ಕಚೇರಿಯ ದಕ್ಷಿಣ ದ್ವಾರ ಓಪನ್ ಮಾಡಿಸಿದರು.

ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿದ್ದ ಸಿಎಂ ಕಚೇರಿಯ ಬಾಗಿಲನ್ನು ಸಿದ್ದರಾಮಯ್ಯ ಅವರು ಶನಿವಾರ ಓಪನ್ ಮಾಡಿಸಿದರು. ದಕ್ಷಿಣಕ್ಕೆ ಬಾಗಿಲು ಇದೆ ಎಂಬ ಕಾರಣಕ್ಕೆ ಯಾವ ಮುಖ್ಯಮಂತ್ರಿಗಳು ಸಹ ಸಿಎಂ ಕಚೇರಿಯ ದಕ್ಷಿಣಾಭಿಮುಖವಾಗಿರುವ ಬಾಗಿಲು ಬಳಸುತ್ತಿರಲಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ ಎಂದು ಹೇಳಿದರು.

ಇದನ್ನೂ ಓದಿ : ಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ : ಜಗದೀಶ್ ಶೆಟ್ಟರ್

ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ಮುಚ್ಚಲಾಗಿತ್ತು. ಅದನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ-ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ ಎಂದು ತಿಳಿಸಿದರು.

ಮೌಢ್ಯಕ್ಕೆ ಬ್ರೇಕ್ ಹಾಕಿದ ಸಿಎಂ

ಸಿದ್ದರಾಮಯ್ಯ ನೇತೃತ್ವದಲ್ಲಿ ಅನ್ನಭಾಗ್ಯ ಯೋಜನೆ ಸಂಬಂಧ ಸಭೆ ಆಯೋಜಿಸಲಾಗಿತ್ತು. ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ಸಿಎಂ ಸಿದ್ದರಾಮಯ್ಯ ದಕ್ಷಿಣ ದ್ವಾರದಿಂದಲೇ ಪ್ರವೇಶ ಮಾಡಿದರು. ಬಳಿಕ, ಅಧಿಕಾರಿಗಳ ಸಭೆ ನಡೆಸಿದರು. ಸಭೆ ಮುಗಿದ ಬಳಿಕವೂ ದಕ್ಷಿಣ ದ್ವಾರದ ಮೂಲಕವೇ ಸಿದ್ದರಾಮಯ್ಯ ಹೊರಗೆ ಬಂದರು. ಆ ಮೂಲಕ ಮೌಢ್ಯಕ್ಕೆ ಬ್ರೇಕ್ ಹಾಕಿದರು.

ಸಭೆಯಲ್ಲಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಸಿ.ಎಸ್ ವಂದಿತಾ ಶರ್ಮಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES

Related Articles

TRENDING ARTICLES