ಬೆಂಗಳೂರು : ಸಿದ್ದರಾಮಯ್ಯನವರು ಪಂಚೆ ಮೇಲೆ ಏರಿಸಿಕೊಂಡು ಉಚಿತ ಗ್ಯಾರಂಟಿ ಘೋಷಣೆ ಮಾಡಿದ್ರು. ಈಗ ಡಿ.ಕೆ ಶಿವಕುಮಾರ್ ಮತ್ತೆ ಸಿದ್ದರಾಮಯ್ಯ ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.
ಬೆಂಗಳೂರಿನ ಅರಮನೆ ಮೈದಾನ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು ಎಲ್ಲರು ಬೀದಿಗೆ ಬಂದಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು ಬಡಿಗೆ ಎತ್ತಿಕೊಳ್ತಾರೆ. ಸಿದ್ದರಾಮಯ್ಯನವರೇ ನೀವು ಆಮೇಲೆ ಪಂಚೆ ಕಳಚಿಕೊಂಡು ಓಡಬೇಕಾಗುತ್ತದೆ. ಮಹಿಳೆಯರು ಪೊರಕೆ ಎತ್ತಿಕೊಂಡು ಓಡಿಸಿಕೊಂಡು ಬರ್ತಾರೆ. ಇನ್ನೂ ಮೂರು ತಿಂಗಳಲ್ಲಿ ಇವರ ಪರಿಸ್ಥಿತಿ ನೋಡಿ ಏನು ಆಗಿರುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಬಿಜೆಪಿಯಲ್ಲಿನ ಅಸಮಾಧಾನ ಯಾವಾಗ ಸ್ಫೋಟ ಆಗುತ್ತೆ ಗೊತ್ತಿಲ್ಲ : ಜಗದೀಶ್ ಶೆಟ್ಟರ್
‘ಕೈ‘ಗೆ ಮುನಿರತ್ನ ಸವಾಲ್
ಮಾಜಿ ಸಚಿವ ಮುನಿರತ್ನ ಮಾತನಾಡಿ, ಕಾಂಗ್ರೆಸ್ ನವರು ಚುನಾವಣೆ ಪ್ರಚಾರದ ವೇಳೆ ಸುಳ್ಳು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದರು. 10 ಕಿಲೋ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ರು. ಅವರೇನಾದ್ರು ಕೇಂದ್ರ ಕೊಡುವ 5 ಕಿಲೋ ಅಕ್ಕಿ ಬಿಟ್ಟು 10 ಕಿಲೋ ಅಕ್ಕಿ ಕೊಟ್ರೆ ಧರ್ಮಸ್ಥಳ ಮಂಜುನಾಥ್ ನ ಮುಟ್ಟಲಿ ಅಂತ ಸವಾಲು ಹಾಕಿದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಸಂಸದ ಪಿ.ಸಿ ಮೋಹನ್, ಮಾಜಿ ಸಚಿವ ಅಶ್ವತ್ಥನಾರಾಯಣ, ಎಸ್. ರಘು, ಭಾಸ್ಕರ್ ರಾವ್, ಜಿಲ್ಲಾಧ್ಯಕ್ಷ ಮಂಜುನಾಥ್, ಗೋಪಿನಾಥ್ ರೆಡ್ಡಿ, ಸುಬ್ಬಣ್ಣ, ಪದ್ಮನಾಭ ರೆಡ್ಡಿ, ಬಿಜೆಪಿ ಎಲ್ಲ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.