Wednesday, December 25, 2024

‘ಹ್ಯಾಕ್ ಸಚಿವ’ರೇ, 10+5 = 15 ಕೆಜಿ ಅಕ್ಕಿ ಕೊಡಿ : ಶಾಸಕ ಯತ್ನಾಳ್

ವಿಜಯಪುರ : ಐದು ಕಿಲೋ ಅಕ್ಕಿ ಈಗಾಗಲೇ ಕೊಡುತ್ತಿದ್ದೇವೆ ಎಂಬ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, 5 ಕಿಲೋ ಅಕ್ಕಿ ಈಗಾಗಲೇ ಕೊಡುತ್ತಿದ್ದೇವೆ. ಇದು ‘ಹ್ಯಾಕ್’ ಸಚಿವರ ಹೇಳಿಕೆ. 5 ಕಿಲೋ ಅಕ್ಕಿ ಕೊಡುತ್ತಿರುವುದು ಕೇಂದ್ರದ ಮೋದಿ ಸರ್ಕಾರ, ನೀವು ಭರವಸೆ ಕೊಟ್ಟಿರುವುದು 10 ಕಿಲೋ ಅಕ್ಕಿ ಎಂದು ಕುಟುಕಿದ್ದಾರೆ.

ನೀವು ಘೋಷಿಸಿದಂತೆ 10+5 = 15 ಕಿಲೋ ಅಕ್ಕಿ ಕೊಡಿ. ನಿಮ್ಮ ಮುಖ್ಯಮಂತ್ರಿಗಳೇ ಹೇಳಿದ್ದು, ಜೂನ್ 1ರಿಂದ ಎಲ್ಲ ಗ್ಯಾರಂಟಿಗಳು ಜಾರಿ ಮಾಡಿಯೇ ಮಾಡುತ್ತೇವೆ ಎಂದು. ಯಾವಾಗ ಗ್ಯಾರಂಟಿಗಳು ಜಾರಿಗೆ ಬರುತ್ತವೆ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯ ಅಪರಾಧ; ಮಾಜಿ ಸಿಎಂ ಯಡಿಯೂರಪ್ಪ

ಜಾರಕಿಹೊಳಿ ಹೇಳಿದ್ದೇನು?

ಸಚಿವ ಜಾರಕಿಹೊಳಿ ಅವರು, ಈಗಾಗಲೇ ಫಲಾನುಭವಿಗಳಿಗೆ ಉಚಿತವಾಗಿ 5 ಕಿಲೋ ಅಕ್ಕಿಯನ್ನು ಕೊಡುತ್ತಿದ್ದೇವೆ. 10 ಕಿಲೋ ಅಕ್ಕಿ ನೀಡುವುದು ಲೇಟಾದರೆ ಅಂಥದ್ದೇನು ಸಮಸ್ಯೆ ಆಗಲ್ಲ. ಅಕ್ಕಿ ಬದಲು ಬೇರೆ ಆಹಾರ ಪದಾರ್ಥಗಳನ್ನೂ ಕೊಡಬಹುದು ಎಂದು ಹೇಳಿಕೆ ನೀಡಿದ್ದರು.

ಹ್ಯಾಕ್ಸಚಿವ ಎಂದ ಯತ್ನಾಳ್

ಕೇಂದ್ರ ಸರ್ಕಾರ ನಮ್ಮ ಸರ್ವರ್ ಹಾಗೂ ಸಿಸ್ಟಮ್ ಗಳನ್ನು ಹ್ಯಾಕ್ ಮಾಡಿದೆ. ಇದರಿಂದ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರಿಂದ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅದರಂತೆ ಶಾಸಕ ಯತ್ನಾಳ್, ಸಚಿವ ಜಾರಕಿಹೊಳಿಯನ್ನು ‘ಹ್ಯಾಕ್ ಸಚಿವರು’ ಅಂತ ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES