Tuesday, February 25, 2025

ಜಸ್ಟ್ 485 ರೂಪಾಯಿಗೆ ಇಬ್ಬರನ್ನು ಕೊಂದ ಗಾಂಜಾ ವ್ಯಸನಿ

ಮೈಸೂರು : ಕೇವಲ 485 ರೂಪಾಯಿಗೆ ಗಾಂಜಾ ವ್ಯಸನಿಯೊಬ್ಬ ಇಬ್ಬರನ್ನು ಕೊಲೆ‌ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್​​ ಮಿಸ್ಟ್ರಿ ಬಯಲಾಗಿದೆ. ಡಬ್ಬಲ್ ಮರ್ಡರ್ ಆರೋಪಿ ಅಭಿಷೇಕ್​​​ ನನ್ನ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಹಾಗೂ ಷಣ್ಮುಖ ಮೃತ ದುರ್ದೈವಿಗಳು. ಆರೋಪಿ ಅಭಿಷೇಕ್ ಕೊಲೆ ನಡೆದ ಪಕ್ಕದ ಬೀದಿಯ ನಿವಾಸಿಯಾಗಿದ್ದ. ಈತ ಗಾಂಜಾ ವ್ಯಸನಿಯಾಗಿದ್ದನು.​​​ ಕೇವಲ 485 ರೂಪಾಯಿಗೆ ಕೊಲೆ‌ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ : ಅಪಾರ್ಟ್‍ಮೆಂಟ್​ನ 10ನೇ ಮಹಡಿಯಿಂದ ಹಾರಿ ಮಹಿಳೆ ಸಾವು

ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಆರೋಪಿ ಅಭಿಷೇಕ್ ವೆಂಕಟೇಶ್​ ಹಾಗೂ ಷಣ್ಮುಖನನ್ನು ಕೊಲೆ ಮಾಡಿ ವೆಂಕಟೇಶ್​​​ ಜೇಬಿನಲ್ಲಿದ್ದ 485 ರೂಪಾಯಿಯನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಭಿಷೇಕ್​​​ ಈ ಹಿಂದೆ ಕೆಲ ಕಳ್ಳತನ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು. ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಗಾಂಜಾ ವ್ಯಸನಿಯಾಗಿದ್ದ ಈತ, ಜನರಿಗೆ ಕಿರುಕುಳ ನೀಡುತ್ತಿದ್ದನು. ಹಣಕ್ಕಾಗಿ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES