Friday, January 10, 2025

ಸಿದ್ದರಾಮಯ್ಯ ಬಾಯಿ ಬಿಟ್ಟ ದಿನ ಸರ್ಕಾರ ಇರೊಲ್ಲ : ಕೆ.ಎಸ್ ಈಶ್ವರಪ್ಪ

ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿ ಬಿಟ್ಟ ದಿನ ಸರ್ಕಾರ ಇರೊಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಗದಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ  ಪೂರ್ಣಾವಧಿ ಸಿಎಂ ಎಂಬ ಕಾಂಗ್ರೆಸ್ ಸಚಿವರ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಹಾಗೂ ಡಾ.ಹೆಚ್.ಸಿ ಮಹದೇವಪ್ಪ ಹೇಳ್ತಾರೆ, ಐದು ವರ್ಷ ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿ ಅಂತ. ಆದರೆ, ಸಿದ್ದರಾಮಯ್ಯ ಯಾಕೆ ಬಾಯಿ ಬಿಡುತ್ತಿಲ್ಲಾ? ಸಿದ್ದರಾಮಯ್ಯ ಬಾಯಿ ಬಿಟ್ಟ ದಿನ ಸರ್ಕಾರ ಇರೊಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ 136 ಸೀಟ್ ಗೆದ್ದ ನಂತ್ರ ಎಷ್ಟು ದಿನಕ್ಕೆ ಮುಖ್ಯಮಂತ್ರಿ ಆಯ್ಕೆ ಮಾಡಿದ್ರು? ಸಿದ್ದರಾಮಯ್ಯ ಬೇಡಾ ಅಂತಾ 15 ಅಂಶಗಳಿರುವ ಪಟ್ಟಿ ಬಿಡುಗಡೆ ಮಾಡಿದ್ರು. ಯಾವ ಕಾರಣಕ್ಕಾಗಿ ಸಿದ್ದರಾಮಯ್ಯ ಬೇಡಾ ಅಂದ್ರು. ಡಿಕೆಶಿ ಮಲ್ಲಿಕಾರ್ಜುನ ಖರ್ಗೆ ನೀವು ಸಿಎಂ ಆಗ್ರಿ ಅಂದ್ರು. ಇವಾಗ ಏನು  ಹೇಳುತ್ತಿದ್ದಾರೆ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ : ಡಿ.ಕೆ ಶಿವಕುಮಾರ್

ಸೆಡ್ಡು ಹೊಡೆದು ಲೋಕಸಭೆ ಗೆಲ್ಲುತ್ತೇವೆ

ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡೋಕೆ ಇವರಿಗೆ ಅಧಿಕಾರ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ಹಿಂದೆ ಬಿದ್ದೆ ಇಲ್ಲ ಅನ್ನೊಲ್ಲ. ಮುಯ್ಯಿಗೆ ಮುಯ್ಯಿ, ಸೆಡ್ಡು ಹೊಡೆದು ಲೋಕಸಭಾ ಚುನಾವಣೆ ಗೆಲ್ಲುತ್ತೇವೆ. ಚುನಾವಣೆ ಪ್ರಣಾಳಿಕೆ ಬರೆಯ ಬೇಕಾದ್ರೆ ಮೈ ಮೇಲೆ ಜ್ಞಾನ ಇರಲಿಲ್ವಾ? 30 ಕಿಲೋ ಅಕ್ಕಿ ಕೊಡುತ್ತೇನೆ ಅಂತ ಘೋಷಣೆ ಮಾಡಿದ್ರು ಅಂದುಕೊಳ್ಳಿ! ಯಾರನ್ನ ಕೇಳಿ ಘೋಷಣೆ ಮಾಡ್ತಾರೆ? ಕಾಂಗ್ರೆಸ್ ನವರಿಗೆ ಖುಷಿಗೆ ಬಂದ ಹಾಗೆ ಘೋಷಣೆ ಮಾಡೋದಾ?ಎಂದು ಗುಡುಗಿದ್ದಾರೆ.

ಅನ್ನರಾಮಯ್ಯ ಅಂತ ಹೆಸರು ಯಾಕೆ?

ಕೇಂದ್ರ ಸರ್ಕಾರಕ್ಕೆ ಕೇಳಿದ್ರಾ? ನರೇಂದ್ರ ಮೋದಿ ಅವರಿಗೆ ಕೇಳಿದ್ರಾ? ಜನರಿಗೆ ಮರಳು ಮಾಡಲು ಗ್ಯಾರಂಟಿ ಘೋಷಣೆ ಮಾಡಿದ್ರು. ಆಗ ನಡೆಸಿದ ಮೋಸ ತಾತ್ಕಾಲಿಕವಾಗಿದೆ. ಕೇಂದ್ರ ಸರ್ಕಾರ ಮುಂಚೆಯಿಂದ 5 ಕಿಲೋ ಅಕ್ಕಿ ಕೊಡುತ್ತಿದೆ. ಕೇಂದ್ರ ಸರ್ಕಾರ ಅಭಿನಂದನೆ ಸಲ್ಲಿಸುತ್ತೇನೆ ಅಂತ ಒಂದು ಬಾರಿನಾದ್ರು ಹೇಳಿದ್ದಾರಾ? ಕೇಂದ್ರದಿಂದ ಬರುವ ಅಕ್ಕಿನೂ ನಮ್ಮದೆ ಅಂತ ಹೇಳಿಕೊಂಡು ಅನ್ನರಾಮಯ್ಯ ಅಂತ ಹೆಸರು ಇಟ್ಟಿಕೊಂಡ್ರು. ಯುವನಿಧಿ ಯೋಜನೆ ಈವರೆಗೆ ಒಬ್ಬರಿಗಾದ್ರೂ ಮುಟ್ಟಿದೆಯಾ? ಎಂದು ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES