Wednesday, January 22, 2025

ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡ ಪ್ರಕಟ : ರಹಾನೆಗೆ ಉಪನಾಯಕನ ಪಟ್ಟ, ಪೂಜಾರಗೆ ಕೊಕ್

ಬೆಂಗಳೂರು : ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಹಾಗೂ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ.

ರೋಹಿತ್​ ಶರ್ಮ ಟೆಸ್ಟ್ ಹಾಗೂ ಏಕದಿನ ಎರಡರಲ್ಲೂ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಟೆಸ್ಟ್ ತಂಡದಿಂದ ಚೇತೇಶ್ವರ ಪೂಜಾರಗೆ ಕೊಕ್ ನೀಡಲಾಗಿದೆ. ಅಜಿಂಕ್ಯ ರಹಾನೆಗೆ ಉಪನಾಯಕನ ಪಟ್ಟ ನೀಡಲಾಗಿದೆ.

ಯುವ ಆಟಗಾರರಿಗೆ ಮಣೆ

ವೆಸ್ಟ್​ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿರುವ ಬಿಸಿಸಿಐ ಈ ಬಾರಿ ಯುವ ಆಟಗಾರರಿಗೆ ಮಣೆ ಹಾಕಿದೆ. ಐಪಿಎಲ್ ನಲ್ಲಿ ಮಿಂಚಿದ್ದ ಬ್ಯಾಟರ್ ಋತುರಾಜ್​ ಗಾಯಕ್ವಾಡ್ ಗೆ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಚಾನ್ಸ್ ನೀಡಲಾಗಿದೆ.

ಯಶಸ್ವಿ ಜೈಸ್ವಾಲ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಕೋಟಾದಲ್ಲಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಚ್ಚರಿಯ ಆಯ್ಕೆಯಲ್ಲಿ ವೇಗಿ ಮುಖೇಶ್ ಕುಮಾರ್ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಕದಿನ ತಂಡ

ರೋಹಿತ್​ ಶರ್ಮ (ನಾಯಕ), ಹಾರ್ದಿಕ್​ ಪಾಂಡ್ಯ (ಉಪನಾಯಕ), ವಿರಾಟ್​ ಕೊಹ್ಲಿ, ಶುಭಮನ್ ಗಿಲ್, ಋತುರಾಜ್​ ಗಾಯಕ್ವಾಡ್​, ಸೂರ್ಯಕುಮಾರ್​ ಯಾದವ್​, ಸಂಜು ಸ್ಯಾಮ್ಸನ್​ (ವಿ.ಕೀ), ಇಶಾನ್​ ಕಿಶನ್​ (ವಿ.ಕೀ), ಶಾರ್ದೂಲ್​ ಠಾಕೂರ್​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಯಜುವೇಂದ್ರ ಚಾಹಲ್​, ಕುಲದೀಪ್​ ಯಾದವ್​, ಜೈದೇವ್​ ಉನಾದ್ಕತ್​, ಮೊಹಮದ್​ ಸಿರಾಜ್​, ಉಮ್ರಾನ್​ ಮಲಿಕ್​, ಮುಕೇಶ್​ ಕುಮಾರ್

ಇದನ್ನೂ ಓದಿ : ದಾಖಲೆಗಳ ‘ಚಾಂಪಿಯನ್ ಧೋನಿ’ : ಸಚಿನ್ ದಾಖಲೆಯೂ ಉಡೀಸ್..!

ಟೆಸ್ಟ್​ ತಂಡ

ರೋಹಿತ್​ ಶರ್ಮ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ವಿರಾಟ್​ ಕೊಹ್ಲಿ, ಋತುರಾಜ್​ ಗಾಯಕ್ವಾಡ್​, ಯಶಸ್ವಿ ಜೈಸ್ವಾಲ್​, ಕೆಎಸ್​ ಭರತ್​ (ವಿ.ಕೀ), ಇಶಾನ್​ ಕಿಶನ್​ (ವಿ.ಕೀ), ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಅಕ್ಷರ್​ ಪಟೇಲ್​, ಮೊಹಮದ್​ ಸಿರಾಜ್​, ಮುಕೇಶ್​ ಕುಮಾರ್​, ಜೈದೇವ್​ ಉನಾದ್ಕತ್​, ನವದೀಪ್​ ಸೈನಿ

RELATED ARTICLES

Related Articles

TRENDING ARTICLES