Monday, January 6, 2025

ಫ್ರೀ ಬಸ್ ಎಫೆಕ್ಟ್ : ಬಸ್ಸಿನಲ್ಲಿ ವೃದ್ದೆಗೆ ಕಪಾಳ‌ಮೋಕ್ಷ ಮಾಡಿದ ಕಂಡಕ್ಟರ್

ಹುಬ್ಬಳ್ಳಿ: ಕಾಂಗ್ರೆಸ್​ ಗ್ಯಾರಂಟಿಯಲ್ಲೊಂದು ಆದ ಫ್ರೀ ಬಸ್​ ಪ್ರಯಾಣ ಸಾರಿಗೆ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಇದಕೆಲ್ಲಾ ಕಡಿವಾಣ ಹಾಕಲು ನಿನ್ನೆಯಷ್ಟೇ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸುತ್ತೋಲೆ ಹೊರಡಿಸಿದೆ ಆದರೂ ಕೂಡ ಮಹಿಳಾ ಕಂಡಕ್ಟರ್​ ಒಬ್ಬರು ವೃದ್ದೆಗೆ ಕಪಾಳ‌ಮೋಕ್ಷ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಕುಂದಗೋಳದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಬಸ್ ನಲ್ಲಿ ‌ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು, ಕೊನೆಗೆ ಮಹಿಳಾ ಕಂಡಕ್ಟರ್, ಅಜ್ಜಿಯ ಕಪಾಳಕ್ಕೆ ಹೊಡೆದಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಮಾಸ್ಟರ್ ಪ್ಲಾನ್

ತನ್ನ ಅಜ್ಜಿಯ ವಯಸ್ಸಿನ ಮಹಿಳೆಯ ಮೇಲೆ ಈ ರೀತಿ ಹಲ್ಲೆ ಮಾಡಿರುವ ಮಹಿಳಾ ನಿರ್ವಹರು ನಡೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಇಲಾಖೆ ಸುತ್ತೋಲೆಯ ಆದೇಶವೇನು?

ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು, ಇನ್ನಿತರೆ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಬಸ್ ನಿರ್ವಾಹಕ ಅಥವಾ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ (Karnataka Transport Dept) ಸುತ್ತೋಲೆ ಹೊರಡಿಸಿತ್ತು.

 

RELATED ARTICLES

Related Articles

TRENDING ARTICLES