Wednesday, January 22, 2025

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಆಯೋಗ ರಚನೆ

ಬೆಂಗಳೂರು : ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಒಬ್ಬರು ಅಧ್ಯಕ್ಷರು, ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ಇದಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅಧ್ಯಕ್ಷರಾಗಿದ್ದಾರೆ. ಆಯೋಗದ ಸದಸ್ಯರಾಗಿ ಬಿಡಿಎ ಕಮಿಷನರ್, ಬೆಂಗಳೂರು ಜಿಲ್ಲಾಧಿಕಾರಿ ನೇಮಕಗೊಂಡಿದ್ದಾರೆ. ಬಿಬಿಎಂಪಿ‌ ವಿಶೇಷ ಆಯುಕ್ತ ರು( ಕಂದಾಯ) ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

12 ವಾರಗಳ ಕಾಲಾವಕಾಶ

ಬಿಜೆಪಿ ಅಧಿಕಾರದಲ್ಲಿ ಜಾರಿಗೊಳಿಸಿದ್ದ ವಾರ್ಡ್ ಪುನರ್ ವಿಂಗಡಣೆಯಲ್ಲಿ ಲೋಪಗಳಿವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗಮನಕ್ಕೆ ತಂದಿತ್ತು. ಹೀಗಾಗಿ, ನ್ಯಾಯಾಲಯವು ಹೊಸದಾಗಿ ವಾರ್ಡ್ ವಿಂಗಡಣೆ ಮಾಡಲು 12 ವಾರಗಳ ಕಾಲಾವಕಾಶವನ್ನು ನೀಡಿದೆ.

250ಕ್ಕೆ ಏರಿಸಲು ಮಾಸ್ಟರ್ ಪ್ಲಾನ್

ಬಿಜೆಪಿ ಸರ್ಕಾರವಿದ್ದಾಗ ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದು ಕ್ರಮಬದ್ಧವಾಗಿಲ್ಲ ಎಂದು ಆರೋಪಿಸಿತ್ತು. ಬಿಜೆಪಿ 198 ವಾರ್ಡ್​​​ಗಳನ್ನು 243ಕ್ಕೆ ಏರಿಸಿತ್ತು. ಇದೀಗ ಕಾಂಗ್ರೆಸ್ 250ಕ್ಕೆ ಏರಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.

RELATED ARTICLES

Related Articles

TRENDING ARTICLES