Monday, December 23, 2024

ಹುಂಡಿ ಕಳ್ಳತನ ಬಿಟ್ಟು ಸರಗಳ್ಳತನಕ್ಕಿಳಿದ ಖತರ್ನಾಕ್ ಗ್ಯಾಂಗ್

ಬೆಂಗಳೂರು: ದೇವಸ್ಥಾನದ ಹುಂಡಿ ಕಳ್ಳತನ ಮಾಡುತ್ತಿದ್ದ ಖದೀಮರು.ಇದ್ದಕ್ಕಿದ್ದಂತೆ ಹುಂಡಿ ಬಿಟ್ಟು ಸರಗಳ್ಳತನಕ್ಕಿಳಿದಿದ್ದಾರೆ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಕಳ್ಳರು ಬ್ಲ್ಯಾಕ್ ಪಲ್ಸರ್​ನಲ್ಲಿ ವಿಥೌಟ್​ ಹೆಲ್ಮೆಟ್ ಬಂದು​​ ಸರಗಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅದುವಲ್ಲದೇ ಈ ಖದೀಮರು ಫೆಬ್ರುವರಿಯಲ್ಲಿ ಜೈಲಿಗೆ ಹೊಗಿದ್ದ ಕಳ್ಳರು, ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರು. ಬಿಡುಗಡೆಯಾಗಿ ಬಂದ್ಮೇಲೆ ಕೂಡಲೇ ಸರಗಳ್ಳತನ ಮಾಡಲು ಶುರು ಮಾಡಿದ್ದರು.

ಇದನ್ನೂ ಓದಿ: ವಾಹನ ಕಳ್ಳರ ಬಂಧನ : ಲಕ್ಷಾಂತರ ಮೌಲ್ಯದ ವಾಹನ, ಚಿನ್ನಾಭರಣ ವಶ

ಬೆಂಗಳೂರಲ್ಲಿ ಒಂದೇ ದಿನ ಮೂರು ಕಡೆ ಈ ಗ್ಯಾಂಗ್​ ಮಹಿಳೆಯರ ಚಿನ್ನದ ಸರ ದೊಚ್ಚಿ ಪರಾರಿಯಾಗಿದ್ದಾರೆ. ಜೂನ್ 14ರ ಬೆಳ್ಳಂಬೆಳಗ್ಗೆ ಮೂರು ಕಡೆ ಸರಗಳ್ಳತನ ಮಾಡಿದ್ದಾರೆ. ಬೆಳಗ್ಗೆ 6-20ಕ್ಕೆ ಜಯನಗರದಲ್ಲಿ ಮಹಿಳೆಯ 50 ಗ್ರಾಂ. ಸರ ದೊಚ್ಚಿದ ಕಿರಾತಕರು, ಬೆಳಗ್ಗೆ 6-41ಕ್ಕೆ ಬನಶಂಕರಿಯಲ್ಲಿ ಮಹಿಳೆಯ 55 ಗ್ರಾಂ. ಸರ ಮತ್ತು ಬೆಳಗ್ಗೆ 7-20ಕ್ಕೆ ಗಿರಿನಗರದಲ್ಲಿ ನಿವಾಸದ ಮಹಿಳೆಯಿಂದ 10 ಗ್ರಾಂ. ಸರ ಅಪಹರಣ ಮಾಡಿದ್ದಾರೆ.

ಸದ್ಯ ಘಟನೆ ಸಿಸಿಟಿವಿಯಲ್ಲಿ ಸಿಕ್ಕ ಮುಖ ಚಹರೆಯಿಂದ ಚೈನ್ ಸ್ನ್ಯಾಚ್ ಮಾಡಿದ್ದವರನ್ನ ವಿದ್ಯಾರಣ್ಯಪುರ ಪೊಲೀಸರು, ಕಬ್ಬಾಳ್ , ಅರ್ಜುನ್ ಹಾಗೂ ರಘು ಈ ಮೂವರನ್ನ ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES